ಡೇವಿಡ್ ವಾರ್ನರ್ಗೆ 2ನೇ ಹೆಣ್ಣು ಮಗು
ಆಸ್ಟ್ರೇಲಿಯಾದ ಆರಂಭಿಕ ಡೇವಿಡ್ ವಾರ್ನರ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ನೂತನವಾಗಿ ಜನಿಸಿರುವ ಪುತ್ರಿಗೆ ಇಂಡಿ ರೇ...
ಸಿಡ್ನಿ: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ನೂತನವಾಗಿ ಜನಿಸಿರುವ ಪುತ್ರಿಗೆ ಇಂಡಿ ರೇ ಎಂದು ನಾಮಕರಣ ಮಾಡಲಾಗಿದೆ.
ವಾರ್ನರ್ ಹಾಗೂ ಅವರ ಪತ್ನಿ ಕ್ಯಾಂಡಿಸ್ಗೆ ಈಗಾಗಲೇ 16 ತಿಂಗಳು ವಯಸ್ಸಿನ ಇವಿ ಮೇ ಎಂಬ ಮುದ್ದಾದ ಹೆಣ್ಣು ಮಗುವಿದೆ. ಇಬ್ಬರೂ ಮಕ್ಕಳನ್ನು ಎತ್ತಿಕೊಂಡ ಭಾವಚಿತ್ರ ವನ್ನು ವಾರ್ನರ್, ಇನ್ಸ್ಟಾ ಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಕ್ಯಾಂಡಿಸ್ ಅವರು ಈ ವಾರ ಮಗುವಿಗೆ ಜನ್ಮ ನೀಡ ಲಿರುವುದು ಮೊದಲೇ ತಿಳಿದಿದ್ದರಿಂದ ವಾರ್ನರ್, ಭಾರತ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.