ಕ್ರೀಡೆ

ಸಫಿನ್‍ಗೆ ಹಾಲ್ ಆಫ್ ಫೇಮ್

Vishwanath S

ಮಾಸ್ಕೋ: ವಿಶ್ವದ ಮಾಜಿ ನಂಬರ್ ಒನ್ ಆಟಗಾರ, ರಷ್ಯಾದ ಮರಾತ್ ಸಫಿನ್ ಅವರನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳಿಸಲಾಗಿದೆ ಎಂದು ರಷ್ಯಾ ಟೆನಿಸ್ ಸಂಸ್ಥೆ ತಿಳಿಸಿದೆ. ಇದೇ ವರ್ಷ ಜುಲೈ 16ರಂದು ನಡೆಯಲಿರುವ ಸಮಾರಂಭದಲ್ಲಿ ಸಫಿನ್ ಅವರಿಗೆ ಈ ಗೌರವ ನೀಡುವ ಸಾಧ್ಯತೆ ಇದೆ. ಸಫಿನ್ ಅವರನ್ನು ಹಾಲ್ ಆಫ್ ಫೇಮ್ನ ಗೌರವ ಸದಸ್ಯತ್ವ ನೀಡುವಂತೆ ರಷ್ಯಾ ಟೆನಿಸ್ ಸಂಸ್ಥೆ 2015ರಲ್ಲಿ ಅರ್ಜಿ ಸಲ್ಲಿಸಿತ್ತು. ಇವರೊಂದಿಗೆ, ಬೆಲ್ಜಿಯಂನ ಮಾಜಿ ಮಹಿಳಾ ಸಿಂಗಲ್ಸ್ ನಂಬರ್ ಒನ್ ಹಾಗೂ ಏಳು ಗ್ರಾಂಡ್ ಸ್ಲಾಂ ವಿಜೇತೆ ಜಸ್ಟಿನ್ ಹೆನಿನ್, ಜೆಕ್ ಗಣರಾಜ್ಯದ ಟೆನಿಸ್ ದಂತಕತೆ, 14 ಗ್ರಾಂಡ್ ಸ್ಲಾಂ ವಿಜೇತೆ ಹೆಲೀನಾ ಸುಕೊವಾ ಅವರ ಹೆಸರುಗಳೂ ಶಿಫಾರಸುಗೊಂಡಿದ್ದವು.

SCROLL FOR NEXT