ಮೈಸೂರು: ತೆಲಂಗಾಣ ನೀಡಿದ ಪ್ರಬಲ ಪೈಪೋಟಿಯ ಮಧ್ಯೆಯೂ ಆಕರ್ಷಕ ಪ್ರದರ್ಶನ ನೀಡಿದ ಭಾರತ ರೇಲ್ವೇಸ್ ತಂಡವು, ತೆಲಂಗಾಣ ವಿರುದ್ಧ 78-50 ಅಂತರದಲ್ಲಿ ಜಯಗಳಿಸಿ ಫೈನಲ್ ತಲುಪಿತು. ನಗರದಲ್ಲಿ ನಡೆಯುತ್ತಿರುವ 66ನೇ ಹಿರಿಯರ ರಾಷ್ಟ್ರೀಯ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯ ಸೆಮಿಫೈನಲ್‍ನ ಮಹಿಳೆಯರ ವಿಭಾಗದಲ್ಲಿ ರೈಲ್ವೇಸ್ ಪರ ಅನಿತಾ ಪೌಲ್ ದುರೈ 20, ಸೀತಾಮಣಿ ತುಡು 13 ಮತ್ತು ರಾಜ ಪ್ರಿಯಾದರ್ಶಿನಿ 12 ಅಂಕ ಗಳಿಸಿದರೆ, ತೆಲಂಗಾಣದ ಪರ ದಿವ್ಯಾ 21, ರಮ್ಯಾ 10 ಅಂಕಗಳಿಸಿದರು. ಇನ್ನು ಪುರುಷರ ವಿಭಾಗದಲ್ಲಿ ಉತ್ತರಾಖಂಡ ತಂಡ, ತಮಿಳುನಾಡು ವಿರುದ್ಧ 2 ಅಂಕಗಳ ಅಂತರದಲ್ಲಿ ರೋಚಕ ಜಯ ಪಡೆದು ಸೆಮಿ ತಲುಪಿತು.