ಆಸ್ಟ್ರೇಲಿಯಾ-ಟೀಂ ಇಂಡಿಯಾ ಏಕದಿನ ಸರಣಿ ಪಂದ್ಯ (ಸಂಗ್ರಹ ಚಿತ್ರ ) 
ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಸರಣಿ ಆಸೀಸ್ ಕೈವಶ

ಆಸ್ಟ್ರೇಲಿಯಾ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು, ಸರಣಿ ಆಸ್ಟ್ರೇಲಿಯಾ ಕೈವಶವಾಗಿದೆ.

ಮೊಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು, ಸರಣಿ ಆಸ್ಟ್ರೇಲಿಯಾ ಕೈವಶವಾಗಿದೆ.

ಸತತ ಎರಡು ಪಂದ್ಯಗಳನ್ನು ಸೋತಿತ್ತ ಟೀಂ ಇಂಡಿಯಾಗೆ ಮೂರನೇ ಏಕದಿನ ಪಂದ್ಯ ಅತಿ ಮುಖ್ಯವಾಗಿತ್ತು. ಮೊಲ್ಬೋರ್ನ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕಿದರು ಗೆಲ್ಲಲು ಸಾಧ್ಯವಾಗಿಲ್ಲ. ನಿಗದಿತ ಓವರ್ ನಲ್ಲಿ ಟೀಂ ಇಂಡಿಯಾ 296 ರನ್ ಗಳ ಟಾರ್ಗೆಟ್ ನ್ನು ಆಸ್ಟ್ರೇಲಿಯಾಗೆ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಆಟಗಾರರು ಇನ್ನು 7 ಬಾಲ್ ಇರುವಂತೆಯೇ ಗುರಿ ಮುಟ್ಟಿದ್ದರು.

ಆಸ್ಟ್ರೇಲಿಯಾ ಪರ ಮಾರ್ಶ್ 62, ಪಿಂಚ್ 21, ಸ್ಟೀಫನ್ ಸ್ಮಿತ್ 41, ಜಾರ್ಜ್ ಬೇಲಿ 23, ಮಾಕ್ಸ್ ವೇಲ್ 96, ಮಾರ್ಶ್ 17, ವಾಡೆ 6, ಫಾಲ್ಕನರ್ ಅಜೇಯ 21 ಹಾಗೂ ಹಸ್ಟೀಂಗ್ಸ್ ಅಜೇಯ 0 ರನ್ ಗಳಿಸಿದ್ದಾರೆ.

ಟೀಂ ಇಂಡಿಯಾ ಪರ ಉಮೇಶ್ ಯಾದವ್, ಇಶಾಂತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!