ನವದೆಹಲಿ: ಪಂದ್ಯದ ಅಂತಿಮ ಹಂತದವರೆಗೂ ತೀವ್ರ ರೋಚಕ ಹಣಾಹಣಿಯಿಂದ ಕೂಡಿದ್ದ ಪೈಪೋಟಿಯ ಅಂತಿಮ ಹಂತದಲ್ಲಿ ಮೋಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಡೆಲ್ಲಿ ಏಸರ್ಸ್ ತಂಡ ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನುಅಲಂಕರಿಸಿದೆ.
ಭಾನುವಾರ ಸಿರಿಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಏಸರ್ಸ್ ತಂಡ 43 ಅಂತರದಲ್ಲಿ ಮುಂಬೈ ರಾಕೆಟ್ಸ್ ತಂಡವನ್ನು ಮಣಿಸಿತು. ಪಂದ್ಯದ ಆರಂಭದಲ್ಲಿ ನಡೆದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮುಂಬೈ ರಾಕೆಟ್ಸ್ ತಂಡ ಶುಭಾರಂಭ ಮಾಡಿತು. ಮುಂಬೈನ ಕಮಿಲ್ಲಾ ಜುಲ್ ಮತ್ತು ವ್ಲಾಡ್ಮಿರ್ ಇವಾನೊವ್ ಜೋಡಿ, ಏಸರ್ಸ್ನ ಗೇಬ್ರಿಯಲ್ ಅಡ್‍ಕಾಕ್ ಮತ್ತು ಅಕ್ಷಯ್ ದೇವಾಲ್ಕರ್ ಜೋಡಿಯನ್ನು 15-6, 15-12 ಗೇಮ್ಗಳಿಂದ ಮಣಿಸಿತು. ನಂತರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಪಂದ್ಯದಲ್ಲಿ ಟಾಮಿ ಸುಗಿಯಾರ್ಟೋ ಅತ್ಯುತ್ತಮ ಪ್ರದರ್ಶನ ನೀಡಿದರು.
ಮುಂಬೈನ ಎಚ್.ಎಸ್ ಪ್ರಣಯ್ ವಿರುದ್ಧ 13-15, 15-9, 15-9 ಗೇಮ್ಗಳಿಂದ ಗೆದ್ದು, ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು. ಪುರುಷರ ಡಬಲ್ಸ್ ನಲ್ಲಿ ಕೂ ಕೀನ್ ಮತ್ತು ಬೂನ್ ಜೋಡಿ 14-15, 15-10, 15-14 ಗೇಮ್ಗಳಿಂದ ಇವಾನೊವ್ ಮತ್ತು ಮಥಿಯಾಸ್ ಜೋಡಿಯನ್ನು ಮಣಿಸಿ 21ರ ಮುನ್ನಡೆ ಪಡೆಯಿತು. ಮಹಿಹಿಳೆಯರ ಸಿಂಗಲ್ಸ್ ನಲ್ಲಿ ಮುಂಬೈನ ಚಿನಾದ ಹಾನ್ ಲೀ, 12-15, 15-8, 15-8 ಗೇಮ್ ಗಳಿಂದ ಮುಂಬೈನ ಪಿ.ಸಿ ತುಳಸಿ ವಿರುದ್ಧ ಜಯ ಸಾಧಿಸಿತು. ಆ ಮೂಲಕ ಪಂದ್ಯದಲ್ಲಿ 32ರ ಮುನ್ನಡೆ ಪಡೆಯಿತು. ಇನ್ನು ನಿರ್ಣಾಯಕ ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಏಸರ್ಸ್ ನ ರಾಜೀವ್ ಔಸೆಫ್ 15-11, 15-6 ಅಂತರದಲ್ಲಿ ಮುಂಬೈನ ಆರ್‍ಎಂವಿ ಗುರುಸಾಯಿದತ್ ವಿರುದ್ಧ ಜಯಿಸಿದರು. ಆ ಮೂಲಕ ಡೆಲ್ಲಿ ಚಾಂಪಿಯನ್ ಪಟ್ಟವನ್ನುಅಲಂಕರಿಸಿ, ರು. 3 ಕೋಟಿ ಬಹುಮಾನ ಮೊತ್ತ ತನ್ನದಾಗಿಸಿಕೊಂಡಿತು.