ನವದೆಹಲಿ: ಜನವರಿ 26ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಬದಲಿಗೆ ಜಸ್ ಪ್ರೀತ್ ಭೂಮ್ರಾಗೆ ಸ್ಥಾನ ಸಿಕ್ಕಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮೊಹಮ್ಮದ್ ಶಮಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದು, ಇದೀಗ ಟಿ-20 ಪಂದ್ಯಕ್ಕೆ ಶಮಿ ಬದಲಿಗೆ ಗುಜರಾತ್ ಕ್ರಿಕೆಟಿಗ ಜಸ್ ಪ್ರೀತ್ ಭೂಮ್ರಾಗೆ ಸ್ಥಾನ ಸಿಕ್ಕಿದೆ.
22 ವರ್ಷದ ಭೂಮ್ರಾ ಗುಜರಾತ್ ತಂಡದಲ್ಲಿ ಆಟವಾಡುತ್ತಿದ್ದು, ಸಯ್ಯದ್ ಮುಷ್ತಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಕೆಟ್ ಗಳನ್ನು ಕಬಳಿಸಿದ್ದರಿಂದ ಸರಣಿ ಭೂಮ್ರರನ್ನು ಆಯ್ಕೆ ಮಾಡಲಾಗಿದೆ.