ಮೆಲ್ಬರ್ನ್: ಮೆಲ್ಬರ್ನ್‌ನಲ್ಲಿ ಈ ವರ್ಷದ ಪ್ರಥಮ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯನ್ ಓಪನ್ ಆರಂಭವಾಗಿರುವ ಹೊತ್ತಿನಲ್ಲೇ, ಟೆನಿಸ್ ನಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಟೆನಿಸ್‌ನಲ್ಲಿ ಟಾಪ್ 50ಪಟ್ಟಿಯಲ್ಲಿರುವ 16 ಮಂದಿ ಆಟಗಾರರು ಕಳೆದ 10 ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಟೆನಿಸ್ ಇಂಟೆಗ್ರಿಟಿ ಯುನಿಟ್ (ಟಿಐಯು) ಆಟಗಾರರ ಮೇಲೆ ನಿಗಾ ಇರಿಸಿತ್ತು. ಈ ಬಗ್ಗೆ ಬಿಬಿಸಿ ಮತ್ತು ಆನ್‌ಲೈನ್ ಬಜ್‌ಫೀಡ್ ನ್ಯೂಸ್ ಸುದ್ದಿ ಪ್ರಕಟಿಸಿದ್ದು, ಟೆನಿಸ್ ಸಂಸ್ಥೆಗಳು ಈ ವರದಿಯನ್ನು ತಳ್ಳಿ ಹಾಕಿವೆ.
ಮ್ಯಾಚ್ ಫಿಕ್ಸಿಂಗ್ ಬಗ್ಗೆ ವಿಷಯ ಗೊತ್ತಿದ್ದರೂ ಟಿಐಯು ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ.
ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಶಂಕೆಯಿದ್ದರೂ ಅವರನ್ನು ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಇದರಲ್ಲಿ ಗ್ರಾಂಡ್ ಸ್ಲಾಮ್ ಪಂದ್ಯ ಗೆದ್ದಿರುವ ಆಟಗಾರರೂ ಇದ್ದಾರೆ. ಅದೇ ವೇಳೆ 8 ಆಟಗಾರರು ಈಗ ಆಸ್ಟ್ರೇಲಿಯನ್ ಓಪನ್ ಪಂದ್ಯವ ನ್ನಾಡುತ್ತಿದ್ದಾರೆ.
ಆದಾಗ್ಯೂ, ಸುದ್ದಿ ಪ್ರಕಟ ಮಾಡಿರುವ ಮಾಧ್ಯಮಗಳು ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಆದರೆ 2007ರಲ್ಲಿ ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಷನಲ್ಸ್ (ಎಟಿಪಿ) ಈ ಬಗ್ಗೆ ತನಿಖೆ ನಡೆಸಿದ ದಾಖಲೆಗಳು ಸಿಕ್ಕಿವೆ ಎಂದು ಮಾಧ್ಯಮಗಳು ಹೇಳಿವೆ.
ಮ್ಯಾಚ್ ಫಿಕ್ಸಿಂಗ್‌ನಲ್ಲಿ ಆಟಗಾರರು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಅವರ ಫೋನ್, ಬ್ಯಾಂಕ್ ಅಥವಾ ಕಂಪ್ಯೂಟರ್‌ನಲ್ಲಿರುವ ದಾಖಲೆಗಳನ್ನು ತನಿಖೆಗೊಳಪಡಿಸಲಾಗಲಿಲ್ಲ. ಈ ಕಾರಣದಿಂದಲೇ ಆಟಗಾರರ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ ಎಂದು ಬಿಬಿಸಿ ಮತ್ತು ಬಜ್ ಫೀಡ್ ಹೇಳಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics