ಮೈಸೂರು: ಅಖಿಲ ಭಾರತ ಅಂತರ ವಿವಿ ಕುಸ್ತಿ ಪಂದ್ಯಾವಳಿಯಲ್ಲಿ ಪಂಜಾಬ್ ನ ವನೀತ್ ಕುಮಾರ್ ದಾವಣಗೆರೆಯ ಎಲ್. ಆನಂದ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ನಲ್ಲಿ ಸೋಮವಾರ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕುಸ್ತಿ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ 75 ಕೆ.ಜಿ. ವಿಭಾಗದಲ್ಲಿ 8-0 ಅಂಕಗಳ ಅಂತರದಿಂದ ಜಯಗಳಿಸಿ ಫೈನಲ್ ಪ್ರವೇಶಿಸಿದರು.
ರಾಜಸ್ಥಾನ ವಿವಿಯ ಮನೋಜ್ ಕುಮಾರ್ ಮತ್ತು ಕಾಶಿ ವಿವಿಯ ಧನಂಜಯ್ ಯಾದವ್ ತೃತೀಯ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗದ 69 ಕೆ.ಜಿ ಸೆಮಿಫೈನಲ್ ನಲ್ಲಿ ಸಿ.ಚರಣ್ ಸಿಂಗ್ ವಿವಿಯ ದಿವ್ಯ ಕರಣ್ ಅವರು, ರೈಪುರ ವಿವಿಯ ಸಾತಿ ಬಘ್ಮರ್ ಅವರನ್ನು ಮಣಿಸಿ, ಫೈನಲ್ ಪ್ರವೇಶಿಸಿದರು. ಶಿವಾಜಿ ವಿವಿಯ ಮಾನೆ ರೇಷ್ಮಾ ಮತ್ತು ಕುರುಕ್ಷೇತ್ರ ವಿವಿಯ ನೈನಾ ತೃತೀಯ ಸ್ಥಾನಗಳಿಸಿದರು.
ಜ.19ರಂದು ಮಹಾರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ 61 ಮತ್ತು 71 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಪುರುಷರ ಕುಸ್ತಿ ನಡೆಯಲಿದೆ ಅಂತೆಯೇ 53 ಕೆಜಿ ಮತ್ತು 55 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ಕೂಡ ಜರುಗಲಿದೆ.