ಭಾರತ ಕಿರಿಯರ ತಂಡದ ನಾಯಕ ಈಶನ್ ಕಿಶನ್ ಜತೆ ರಾಹುಲ್ ದ್ರಾವಿಡ್ 
ಕ್ರೀಡೆ

ರೋಟೇಟ್ ಹೆಚ್ಚು ಒತ್ತು

ಬ್ಯಾಟ್ಸ್ ಮ್ಯಾನ್ ಗಳಲ್ಲಿ ಮತ್ತಷ್ಟು ವೃತ್ತಿಪರತೆಯನ್ನು ತರುವ ನಿಟ್ಟಿನಲ್ಲಿ ರೊಟೇಟಿಂಗ್ ಸ್ಟ್ರೈಕ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿರುವುದಾಗಿ ತರಬೇತುದಾರ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ಮುಂಬೈ: ಕಿರಿಯರ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಮತ್ತಷ್ಟು ವೃತ್ತಿಪರತೆಯನ್ನು ತರುವ ನಿಟ್ಟಿನಲ್ಲಿ ರೊಟೇಟಿಂಗ್ ಸ್ಟ್ರೈಕ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿರುವುದಾಗಿ ಕಿರಿಯರ ಕ್ರಿಕೆಟ್ ತಂಡದ ತರಬೇತುದಾರ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
19 ವರ್ಷದೊಳಗಿನವರ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದೊಟ್ಟಿಗೆ ಬಾಂಗ್ಲಾದೇಶಕ್ಕೆ ತೆರಳುವ ಮುನ್ನಾ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ``ಕ್ರೀಸ್ ನಲ್ಲಿ ಹೊಡಿ, ಬಡಿ ತಂತ್ರಗಾರಿಕೆಯೇ ಜನಾಕರ್ಷಣೆ ಗಳಿಸಿರುವ ಈ ಕಾಲಘಟ್ಟದಲ್ಲಿ ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳು ಯಾವಾಗಲೂ ದೊಡ್ಡ ಹೊಡೆತಗಳತ್ತಲೇ ಗಮನ ಹರಿಸುತ್ತಾರೆ.  ಅದರ ಜತೆಗೇ, ಒಂಟಿ ರನ್ ಕದಿಯುವ ಬಗ್ಗೆ ಅವ-ರನ್ನು ಹೆಚ್ಚು ಸೆಳೆಯಬೇಕಿದೆ'' ಎಂದು ತಿಳಿಸಿದರು.
ಕಿರಿಯರ ವಿಶ್ವಕಪ್ ಪಂದ್ಯಾವಳಿಯು ಇದೇ ತಿಂಗಳು 22ರಿಂದ ಫೆಬ್ರವರಿ 14ರವರೆಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಒಟ್ಟು ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಭದ್ರತೆಯ ಕಾರಣ ಮುಂದೊಡ್ಡಿ ಆಸ್ಟ್ರೇಲಿಯಾ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಅಳಿವಿನಂಚಿನ ‘ಗೋಡಾವಣ’ಕ್ಕೆ ಮರುಜೀವ: ಜೈಸಲ್ಮೇರ್‌ನಲ್ಲಿ 2 Great Indian Bustards ಪಕ್ಷಿಗಳ ಬಿಡುಗಡೆ-Video

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ