ಸಚಿನ್ ತೆಂಡೂಲ್ಕರ್, ಬೈಚುಂಗ್ ಭುಟಿಯಾ ( ಸಂಗ್ರಹ ಚಿತ್ರ) 
ಕ್ರೀಡೆ

ರಾಷ್ಟ್ರಗೀತೆ ವಿಡಿಯೋದಲ್ಲಿ ಸಚಿನ್, ಸಾನಿಯಾ, ಭುಟಿಯಾ

ವಿಶೇಷ ರಾಷ್ಟ್ರಗೀತೆಯ ವಿಡಿಯೋ ನಿರ್ಮಿಸಲಾಗಿದ್ದು, ಈ ವಿಡಿಯೋದಲ್ಲಿ ಕ್ರೀಡಾ ತಾರೆಯರಾದ ಸಚಿನ್ ತೆಂಡೂಲ್ಕರ್, ಸಾನಿಯಾ ಮಿರ್ಜಾ ಹಾಗೂ ಬೈಚುಂಗ್ ಬುಟಿಯಾ ಅವರು ಸಹ ಕಾಣಿಸಿಕೊಳ್ಳಲಿದ್ದಾರೆ.

ನವದೆಹಲಿ: ಇದೇ ತಿಂಗಳು 26 ರಂದು 67 ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ವಿಶೇಷ ರಾಷ್ಟ್ರಗೀತೆಯ ವಿಡಿಯೋ ನಿರ್ಮಿಸಲಾಗಿದ್ದು, ಈ ವಿಡಿಯೋದಲ್ಲಿ ಕ್ರೀಡಾ ತಾರೆಯರಾದ ಸಚಿನ್ ತೆಂಡೂಲ್ಕರ್, ಸಾನಿಯಾ ಮಿರ್ಜಾ ಹಾಗೂ ಬೈಚುಂಗ್ ಭುಟಿಯಾ  ಅವರು ಸಹ ಕಾಣಿಸಿಕೊಳ್ಳಲಿದ್ದಾರೆ.
ಭಾರತ ಹಾಗೂ ಮುಂಬೈನ ಮಾಜಿ ಸ್ಪಿನ್ನರ್ ನಿಲೇಸ್ ಕುಲಕರ್ಣಿ ಈ ವಿಡಿಯೋ ನಿರ್ಮಾಪಕರಾಗಿದ್ದು, ಇದು ಭಾರಿ ಖ್ಯಾತಿ ಗಳಿಸುವ ನಿರೀಕ್ಷೆ ಇದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಗೀತೆಯಲ್ಲಿ ಕ್ರೀಡಾ ತಾರೆಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ರಾಷ್ಟ್ರಗೀತೆ ಹಾಡುವಾಗ ದೇಶವೇ ಒಗ್ಗೂಡುತ್ತದೆ. ದೇಶದ ಕೋಟ್ಯಾಂತರ ಜನರನ್ನು ಒಟ್ಟಿಗೆ ಸೇರಿಸಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಈ ಕಾರ್ಯ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಕುಲಕರ್ಣಿ ತಿಳಿಸಿದ್ದಾರೆ.
ಈ ವಿಡಿಯೋವನ್ನು ಮುಂಬೈ ನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಅಭಿಜಿತ್ ಪಾಂಸೆ ನಿರ್ದೇಶಿಸಲಿದ್ದಾರೆ ಹಾಗೂ ಬಾಲಿವುಡ್ ಸಂಗೀತ ನಿರ್ದೇಶಕ ರಾಮ್ ಸಂಪತ್ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

SCROLL FOR NEXT