ಮನಿಷ್ ಪಾಂಡೆ 
ಕ್ರೀಡೆ

ಏಕ ದಿನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಆಸೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ದಾಖಲಿಸುವ ಮೂಲಕ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಆಸೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ದಾಖಲಿಸುವ ಮೂಲಕ ವೈಟ್‌ ವಾಶ್‌ ನಿಂದ ತಪ್ಪಿಸಿಕೊಂಡಿದೆ.
ಭಾರತೀಯ ಬೌಲರ್​ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ಬೃಹತ್ ಮೊತ್ತ ಕಲೆ ಹಾಕಿ, ಭಾರತಕ್ಕೆ 331 ರನ್ ಗೆಲುವಿನ ಗುರಿ ನೀಡಿತ್ತು.
ಬೃಹತ್‌ ಸವಾಲನ್ನು ಬೆನ್ನಟ್ಟಿದ ಭಾರತ, ಕನ್ನಡಿಗ ಮನಿಷ್‌ ಪಾಂಡೆ ಅವರ ಭರ್ಜರಿ ಶತಕ, ರೋಹಿತ್‌ ಶರ್ಮಾ ಮತ್ತು ನಾಯಕ ಧೋನಿ ಅವರ ಸಮಯೋಚಿತ ಆಟದಿಂದಾಗಿ 49.4 ಓವರ್‌ಗಳಲ್ಲಿಯೇ ಗುರಿ ಮುಟ್ಟಿ ಸೋಲಿನ ಸರಣಿಯಿಂದ ಹೊರ ಬಂದಿತು.
ಸರಣಿಯುದ್ದಕ್ಕೂ ಅಮೋಘ ನಿರ್ವಹಣೆ ನೀಡಿದ್ದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ 99 ರನ್‌ಗಳಿಸಿ, ಸರಣಿ ಶ್ರೇಷ್ಠನಾದರೆ, ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಮನಿಷ್ ಪಾಂಡೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಭರ್ಜರಿ ಬ್ಯಾಟಿಂಗ್‌ ಮಾಡಿದ ಶಿಖರ್ ಧವನ್‌ 56 ಎಸೆತಗಳಲ್ಲಿ 78 ರನ್‌ಗಳಿಸಿ ಔಟಾದರು.ಕೊಹ್ಲಿ 8 ರನ್‌ಗೆ ನಿರ್ಗಮಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT