ಖುಲ್ನಾ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯನ್ನು 2-2ರಿಂದ ಟೈ ಮಾಡಿಕೊಂಡ ಬಳಿಕ ಜಿಂಬಾಬ್ವೆ ತಂಡದ ನಾಯಕತ್ವಕ್ಕೆ ಎಲ್ಟಾನ್ ಜಿಗುಂಬುರಾ ರಾಜಿನಾಮೆ ನೀಡಿದ್ದಾರೆ.
ಶುಕ್ರವಾರ ಈ ವಿಷಯ ತಿಳಿಸಿದ ಚಿಗುಂಬುರಾ ತಂಡವನ್ನು ಮುನ್ನಡೆಸಲು ಬೇರೆಯವರಿಗೆ ಬಿಟ್ಟುಕೊಡಲು ಇದು ಅತ್ಯುತ್ತಮ ಸಮಯವೆಂದೇ ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಸತತ ಎರಡೂ ಸರಣಿಯಲ್ಲಿ ತಲಾ 2-3 ಅಂತರದ ಏಕದಿನ ಸರಣಿ ಸೋಲು ಕಂಡಿದ್ದರಿಂದ ಚಿಗುಂಬುರಾ ಈ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಕ್ಷೀಣವಾಗಿತ್ತು.