ರಿಯೋ ಡಿ ಜಾನೆರೋ: ರಿಯೋ ಒಲಂಪಿಕ್ಸ್ ೨೦೧೬ ರ ಕೊನೆಯ ಹಂತದ ಟಿಕೆಟ್ ಮಾರಾಟದ ಮೊದಲ ಎರಡು ದಿನಗಳಲ್ಲಿ ೨೨೦೦೦೦ಕ್ಕೂ ಹೆಚ್ಚು ಟಿಕೆಟ್ ಗಳನ್ನು ಬ್ರೆಜಿಲ್ ನ ನಾಗರಿಕರಿಗೆ ಮಾರಾಟ ಮಾಡಲಾಗಿದೆ.
ಅಥ್ಲೆಟಿಕ್ಸ್, ಈಜು, ಫುಟ್ಬಾಲ್, ಹ್ಯಾಂಡ್ ಬಾಲ್, ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ, ಬ್ಯಾಸ್ಕೆಟ್ ಬಾಲ್. ವಾಲಿ ಬಾಲ್, ಬೀಚ್ ವಾಲಿ ಬಾಲ್, ಟೆನಿಸ್, ಜುಡೊ ಮತ್ತು ಜಿಮ್ನ್ಯಾಸ್ಟಿಕ್ಸ್ ಆಟಗಳ ಟಿಕೆಟ್ ಗಳಿಗೆ ಅತಿ ಹೆಚ್ಚು ಬೇಡಿಕೆಯಿತ್ತು ಎಂದು ತಿಳಿದುಬಂದಿದೆ.
"ಸುಮಾರ್ ೫೦೦೦೦೦ ಟಿಕೆಟ್ ಗಳು ಲಭ್ಯವಿದ್ದು, ಅತೀವ ಬೇಡಿಕೆಯಿದೆ. ನಿಮಿಷಕ್ಕೆ ೩೦೦೦ ಟಿಕೆಟ್ ಗಳಷ್ಟು ಬಿಕರಿಯಾಗುತ್ತಿವೆ" ಎಂದು ಆಯೋಜಕರು ತಿಳಿಸಿದ್ದಾರೆ.
ಅಂತರ್ಜಾಲ ತಾಣದ ಮೂಲಕ ಪ್ರದೇಶಿಕ ನಿವಾಸಿಗಳು ಟಿಕೆಟ್ ಕೊಂಡುಕೊಳ್ಳಬಹುದಾಗಿದ್ದರೆ, ಅಧಿಕೃತ ಮಾರಾಟಗಾರರ ಮೂಲಕ ವಿದೇಶಿಯರು ಕೊಂಡುಕೊಳ್ಳಬೇಕಿದೆ.