ನಟ ಯಶ್ - ಬೆಂಗಳೂರು ಬುಲ್ಸ್ ನ ನಾಯಕ ಸುರ್ಜಿತ್ ನರ್ವಾಲ್ 
ಕ್ರೀಡೆ

ಪ್ರೊ ಕಬಡ್ಡಿ ಸೀಸನ್ 3 : ಬೆಂಗಳೂರು ಬುಲ್ಸ್ ಗೆ ಯಶ್ ರಾಯಭಾರಿ

ಕನ್ನಡದ ಖ್ಯಾತ ನಟ ಯಶ್, ಪ್ರೊ.ಕಬಡ್ಡಿ ತಂಡವಾದ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ...

ಕನ್ನಡದ ಖ್ಯಾತ ನಟ ಯಶ್, ಪ್ರೊ.ಕಬಡ್ಡಿ ತಂಡವಾದ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ನೇಮಕವಾಗಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಕಟವಾಗಿದ್ದು, ಜ.30 ರಿಂದ ಆರಂಭಗೊಳ್ಳಲಿರುವ ಪ್ರೊ.ಕಬಡ್ಡಿ ಟೂರ್ನಿಯ ಬೆಂಗಳೂರು ಆವೃತ್ತಿಯಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯನ್ನೂ ಇದೇ ವೇಳೆ ಬಿಡುಗಡೆಗೊಳಿಸಲಾಯಿತು. 
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ಟಾರ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಸಂಜಯ್ ಗುಪ್ತಾ, ಕಳೆದೆರಡು ಪ್ರೊ.ಕಬಡ್ಡಿ ಆವೃತ್ತಿಗಳಿಗೆ ಅಭಿಮಾನಿಗಳು ಹಾಗೂ ಜನರು ನಿರೀಕ್ಷೆಗೂ ಮೀರಿ ಸ್ಪಂದನೆ ನೀಡಿದ್ದಾರೆ. ಟಿವಿ ಮೂಲಕ ಹಾಗೂ ನೇರವಾಗಿ ಪಂದ್ಯಗಳನ್ನು ವೀಕ್ಷಿಸುವ ಮೂಲಕ ಪ್ರೊ ಕಬಡ್ಡಿಗೆ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು ಎಂದರು. 
ನಂತರ ಮಾತನಾಡಿದ ಯಶ್, ಪ್ರೊ.ಕಬಡ್ಡಿಯಲ್ಲಿ ಬೆಂಗಳೂರು ತಂಡಕ್ಕೆ ರಾಯಭಾರಿಯಾಗಿ ನನ್ನನ್ನು ನೇಮಿಸಿರುವುದು ಖುಷಿಕೊಟ್ಟಿದೆ. ಅದಕ್ಕಾಗಿ ಫ್ರಾಂಚೈಸಿಗೆ ಧನ್ಯವಾದ ಹೇಳಲಿಚ್ಛಿಸುತ್ತೇನೆ, ದೈಹಿಕ ಶಕ್ತಿಯನ್ನೇ ಮಾತ್ರವಲ್ಲ, ಮಾನಸಿಕ ಸಮತೋಲನ, ತಂತ್ರಗಾರಿಕೆಗಳೂ ಅಗತ್ಯವಿರುವ ಕಬಡ್ಡಿ ಕ್ರೀಡಾ ರಂಗದಲ್ಲೇ ವಿಶಿಷ್ಠವಾಗಿದ್ದು ನಾನೂ ಇದರ ಅಭಿಮಾನಿಯಾಗಿದ್ದೇನೆ. ಹಾಗಾಗಿ ಇದೇ ಮಾಸಾಂತ್ಯಕ್ಕೆ ಆರಂಭವಾಗಲಿರುವ ಕಬಡ್ಡಿ 3 ನೇ ಆವೃತ್ತಿಯನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದೇನೆ ಎಂದರು. 
ಫೆ 3 ರಿಂದ ಆರಂಭಗೊಳ್ಳುವ  ಪ್ರೊ.ಕಬಡ್ಡಿ ಬೆಂಗಳೂರು ಆವೃತ್ತಿಯ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಆವೃತ್ತಿಯ ಮೊದಲ ದಿನ ಪಂದ್ಯ ಶುರುವಾಗುವ ಮುನ್ನ ಯಶ್, ರಾಷ್ಟ್ರಗೀತೆ ಹಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!