ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ರೋಹನ್ ಬೋಪಣ್ಣ ಹಾಗೂ ಯುಂಗ್ ಜಾನ್ ಚಾನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಬೋಪಣ್ಣ–ಚಾನ್ ಜೋಡಿಯು ಉತ್ತಮ ಆರಂಭ ಪಡೆದಿತ್ತು. ಆದರೆ ಈ ಜೋಡಿ 2–6, 5–7ರಲ್ಲಿ ಅಂದ್ರೆಜಾ ಕ್ಲೆಪಾಕ್ ಹಾಗೂ ಟ್ರೀಟ್ ಹ್ಯುಯಿ ವಿರುದ್ಧ ಸೋಲನನ್ನುಭವಿಸಿದರು.