ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ವೈಖರಿ ನೋಡಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ತತ್ತರಿಸಿದ್ದು ಸುಳ್ಳಲ್ಲ. ತಮ್ಮ ಹೋಮ್ ಗ್ರೌಂಡ್ ಎಂಬಂತೆ ಬ್ಯಾಟ್ ಬೀಸಿದ ಕೊಹ್ಲಿ, ಬೌನ್ಸಿ ಪಿಚ್ ನಲ್ಲೂ 55 ಎಸೆತಗಳಲ್ಲಿ 90 ರನ್ ಸಿಡಿಸಿ ಕಾಂಗರೂ ಬೌಲರ್ ಗಳ ಬೆವರಿಳಿಸಿದರು.
ಪಂದ್ಯದ ಬಳಿಕ ಮಾತನಾಡಿದ್ದ ಧೋನಿ ಜೋಕ್ ಒಂದು ಮಾಡಿದ್ದು ಇನ್ನೂ ಸ್ವಲ್ಪ ಸಮಯದಲ್ಲೇ ಅಡಿಲೇಡ್ ಸ್ಟೇಡಿಯಂನಲ್ಲಿ ಕೊಹ್ಲಿ ಹೆಸರಿನ ಸ್ಟ್ಯಾಂಡ್ ನಿರ್ಮಾಣವಾಗಲಿದೆ ಎನ್ನುವ ಮೂಲಕ ಅವರ ಕೊಹ್ಲಿ ಬ್ಯಾಂಟಿಗನ್ನು ಹೊಗಳಿದ್ದರು.
ಅಡಿಲೇಡ್ ನಲ್ಲಿ ಮಿಂಚು ಹರಿಸಿದ್ದ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗಳು ಕೇಳಿಬರುತ್ತಿದೆ. ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಈ ಪಿಚ್ ನಲ್ಲಿ ಆಡುವುದಿಲ್ಲ ಎಂಬೆಲ್ಲ ತಮಾಷೆ ಮಾತುಗಳು ಕೇಳಿ ಬರುತ್ತಿವೆ.