ದಾಖಲೆ ಬರೆದ ದೆಬೋರಾ ಹೆರಾಲ್ಡ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೈಕ್ಲಿಂಗ್ ಗೆ ಗೌರವ ತಂದೀಯುತ್ತಿರುವ ಯುವ ಸೈಕ್ಲಿಸ್ಟ್ ದೆಬೊರಾ ಹೆರಾಲ್ಡ್ ಇದೀಗ 2016ರ...
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೈಕ್ಲಿಂಗ್ ಗೆ ಗೌರವ ತಂದೀಯುತ್ತಿರುವ ಯುವ ಸೈಕ್ಲಿಸ್ಟ್ ದೆಬೊರಾ ಹೆರಾಲ್ಡ್ ಇದೀಗ 2016ರ ಯೂನಿಯನ್ ಸೈಕ್ಲಿಸ್ಟ್ ಇಂಟರ್ ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಸೈಕ್ಲಿಸ್ಟ್ ಎಂದು ದಾಖಲೆ ಬರೆದಿದ್ದಾರೆ.
ಅಂಡಮಾನ್ ನಿಕೋಬಾರ್ ಮೂಲದ 20 ವರ್ಷ ವಯಸ್ಸಿನ ದೆಬೋರಾ ಕಳೆದ ವರ್ಷ ನಡೆದಿದ್ದ ತೈವಾನ್ ಕಪ್ ಅಂತಾರಾಷ್ಟ್ರೀಯ ಕ್ಲಾಸಿಕ್ ನಲ್ಲಿ ಐದು ಪದಕ ಪಡೆದಿದ್ದರು. ಈ ಪೈಕಿ ಮಹಿಳೆಯರ ಎಲೈಟ್ ವಿಭಾಗದಿಂದ ಚಿನ್ನದ ಪದಕವೂ ಸೇರಿತ್ತು.
ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. ಅಲ್ಲದೆ, ವಿಶ್ವ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕೇರಿದರು. ಇದಾದ ನಂತರ, 2015ರ ಡಿಸೆಂಬರ್ ನಲ್ಲಿ ನಡೆದಿದ್ದ ಟ್ರ್ಯಾಕ್ ಏಷ್ಯಾ ಕಪ್ ಚಾಂಪಿಯನ್ ಶಿಪ್ ನಲ್ಲಿ 11 ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೂರನೇ ಸ್ಥಾನ ತಂದು ಕೊಟ್ಟಿದ್ದರು. ಈ ಎಲ್ಲಾ ಸಾಧನೆಗಳಿಂದ ಅವರು ಗಳಿಸಿರುವ ಅಂಕಗಳ ಆಧಾರದ ಮೇಲೆ ಯುಸಿಐ ವಿಶ್ವ ಸೈಕ್ಲಿಂಗ್ ರೇಸ್ ನಲ್ಲಿ ಪಾಲ್ಗೊಳ್ಳಲು ಅರ್ಹ ಸ್ಪರ್ಧಿ ಎಂದಿದೆ.