ಢಾಕಾ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಟೂರ್ನಿಯ ಮೊದಲ ದಿನದ ಪಂದ್ಯದಲ್ಲೇ ಭಾರತ, ಬಾಂಗ್ಲಾದೇಶವನ್ನು ಎದುರಿಸಲಿದ್ದು, ಟೀಂ ಇಂಡಿಯಾ ಪಾಲಿಗೆ ಮಹತ್ವದ ಪಂದ್ಯವೆನಿಸಿರುವ ಪಾಕಿಸ್ತಾನ ವಿರುದ್ಧದ ಸೆಣಸು ಫೆಬ್ರವರಿ 27ರಂದು ನಡೆಯಲಿದೆ.
ಮಾರ್ಚ್ 6ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿವೆ. ಅದಲ್ಲದೆ, ಈ ಬಾರಿಯ ಏಷ್ಯಾ ಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತದೆ. ಎಲ್ಲಾ ಪಂದ್ಯಗಳಿಗೂ ಬಾಂಗ್ಲಾದೇಶದ ಪ್ರಮುಖ ನಗರವಾದ ಮೀರ್ ಪುರ ಆತಿಥ್ಯ ವಹಿಸಲಿದೆ.
ಏಷ್ಯಾ ಕಪ್ ವೇಳಾಪಟ್ಟಿ:
ಫೆಬ್ರವರಿ 24-ಭಾರತ ವಿರುದ್ಧ ಬಾಂಗ್ಲಾದೇಶ
ಫೆಬ್ರವರಿ 25- ಶ್ರೀಲಂಕಾ ವಿರುದ್ಧ
26-ಬಾಂಗ್ಲಾದೇಶ ವಿರುದ್ಧ
27- ಭಾರತ ವಿರುದ್ಧ ಪಾಕಿಸ್ತಾನ
28-ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ
29-ಪಾಕಿಸ್ತಾನ ವಿರುದ್ಧ
ಮಾರ್ಚ್ 1-ಭಾರತ ವಿರುದ್ಧ ಶ್ರೀಲಂಕಾ
2- ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ
3- ಭಾರತ ವಿರುದ್ಧ
4-ಪಾಕಿಸ್ತಾನ ವಿರುದ್ಧ ಶ್ರೀಲಂಕಾ
6- ಪ್ರಶಸ್ತಿ ಸುತ್ತಿನ ಪಂದ್ಯ