ನೊವಾಕ್ ಜೊಕೊವಿಚ್ 
ಕ್ರೀಡೆ

ಫೆಡರರ್ ಮಣಿಸಿದ ಜೊಕೊ ಫೈನಲ್ ಗೆ

ಮೆಲ್ಬೋರ್ನ್ ಪಾರ್ಕ್ ನಲ್ಲಿ ಬಹುತೇಕರು ಭಾವಿಸಿದ್ದಂತೆಯೇ ಆಗಿದೆ. ಪ್ರಚಂಡ ಫಾರ್ಮ್ ನಲ್ಲಿರುವ ಸರ್ಬಿಯಾ ಆಟಗಾರ...

ಮೆಲ್ಬೋರ್ನ್: ಮೆಲ್ಬೋರ್ನ್ ಪಾರ್ಕ್ ನಲ್ಲಿ ಬಹುತೇಕರು ಭಾವಿಸಿದ್ದಂತೆಯೇ ಆಗಿದೆ. ಪ್ರಚಂಡ ಫಾರ್ಮ್ ನಲ್ಲಿರುವ ಸರ್ಬಿಯಾ ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಆರ್ಭಟಕ್ಕೆ ತಡೆ ಹಾಕಲು ಸ್ವಿಸ್ ಆಟಗಾರ ರೋಜರ್ ಫೆಡರರ್ ಗೆ ಸಾಧ್ಯವಾಗದೆ ಹೋಗಿದೆ. ಹೀಗಾಗಿ ಆರನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಫೈನಲ್ ಗೆ ಜೊಕೊವಿಚ್ ಲಗ್ಗೆ ಹಾಕಿದ್ದಾರೆ. ಅಂತೆಯೇ ಸೆರೆನಾ ವಿಲಿಯಮ್ಸ್ ಕೂಡ ಫೈನಲ್ ತಲುಪಿದ್ದು, ಈ ಇಬ್ಬರು ಹಾಲಿ ಚಾಂಪಿಯನ್ನರ ಐತಿಹಾಸಿಕ ಕ್ಷಣಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.

ಗುರುವಾರ ರಾಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ವಿಶ್ವದ ಮುಂಚೂಣಿ ಆಟಗಾರ ಜೊಕೊವಿಚ್ ಮೂರನೇ ಶ್ರೇಯಾಂಕಿತ ಫೆಡರರ್ ಎದುರು ಆಕರ್ಷಕ ಆಟವಾಡಿ 6-1, 6-2, 2-6, 6-3 ಸೆಟ್ ಗಳಲ್ಲಿ ವಿಜೃಂಭಿಸಿ ಐದನೇ ಬಾರಿಗೆ ಗ್ರಾಂಡ್ ಸ್ಲಾಮ್ ಟೂರ್ನಿಯ ಫೈನಲ್ ತಲುಪಿದರು. ಇದರೊಂದಿಗೆ ಫೆಡರರ್ ಜತೆಗಿನ ಒಟ್ಟಾರೆ 45 ಮುಖಾಮುಖಿಗಳಲ್ಲಿ ಜೊಕೊವಿಚ್ 23-22ರ ಮುನ್ನಡೆ ಸಾಧಿಸಿಯೂ ಗಮನ ಸೆಳೆದರು. ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಕೆನಡಾದ ಮಿಲಾಸ್ ರೋನಿಕ್ ಇಲ್ಲವೇ ಬ್ರಿಟನ್ ನ ಆ್ಂಡಿ ಮರ್ರೆಯನ್ನು ಜೊಕೊವಿಚ್ ಎದುರುಗೊಳ್ಳಲಿದ್ದಾರೆ.

ಸೆರೆನಾಗೆ ಸುಲಭ ಜಯ: ಇನ್ನು ಗಾಯದ ಮರೆಯಲ್ಲೇ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ನಲ್ಲಿ ಭಾಗವಹಿಸಿದ್ದ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್, ಸ್ವತಃ ತನ್ನ ನಿರೀಕ್ಷೆಯನ್ನೂ ಮೀರಿ ಮಿಂಚಿನ ಪ್ರದರ್ಶನ ನೀಡಿದ್ದರ ಫಲವಾಗಿ ಏಳನೇ ಬಾರಿಗೆ ಮೆಲ್ಬೋರ್ನ್ ಪಾರ್ಕ್ ನಲ್ಲಿ ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಜತೆಗಾತಿ ಹಿಂಗಿಸ್ ಮಣಿಸಿದ ಸಾನಿಯಾ!
ಇತ್ತ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗೆ ಪ್ರಶಸ್ತಿ ಸುತ್ತು ತಲುಪಿರುವ ಸಾನಿಯಾ ಮಿರ್ಜಾ, ಅವರ ವಿರುದ್ಧವೇ ಗೆದ್ದು ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಓಪನ್ ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸುವ ಸಲುವಾಗಿ ದಿಟ್ಟ ಹೆಜ್ಜೆ ಇಟ್ಟಿರುವ ಸಾನಿಯಾ, ಅದರ ಫಲವಾಗಿ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಭಾರತದ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಮತ್ತು ಹಿಂಗಿಸ್ ಜೋಡಿಗೆ ಸೋಲುಣಿಸಿ ಸೆಮಿಫೈನಲ್ ತಲುಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

‘ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು’: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ: 4 ಮಂದಿಗೆ ಗಂಭೀರ ಗಾಯ, Video

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ; ಕಾರಣ ನಿಗೂಢ!