ನವದೆಹಲಿ: ಶುಕ್ರವಾರ ತನ್ನ ಹುಟ್ಟುಹಬ್ಬವನ್ನು ಆಟರಿಸಿಕೊಳ್ಳುತ್ತಿರುವ ಯುವ ಶೂಟರ್ ಕಿನಾನ್ ಚೆನ್ನೈ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಿಟ್ಟಿಸುವ ಮೂಲಕ ಅದನ್ನು ಅರ್ಥಗರ್ಭಿತವಾಗಿಸಿದರೆ, ಲಂಡನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್ ರಿಯೋಗೆ ಅರ್ಹತೆ ಗಳಿಸಲು ವಿಫಲರಾದರು.
ಇಲ್ಲಿನ ಡಾ.ಕಾರ್ನಿಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಶೂಟಿಂಗ್ ಸ್ಪರ್ಧಾವಳಿಯಲ್ಲಿ 26 ವರ್ಷದ ಕಿನಾನ್,ಪುರುಷರ ಟ್ರ್ಯಾಪ್ ಶೂಟಿಂಗ್ ನಲ್ಲಿ ಪದಕ ಗೆಲ್ಲಲಾಗದೆ ಹೋದರೂ, ನಾಲ್ಕನೇ ಸ್ಥಾನ ಗಳಿಸುವ ಮೂಲಕ ಮೂವರು ಸ್ಪರ್ಧಿಗಳ ಜತೆಗೆ ಸಮಬಲ ಸಾಧಿಸಿ ಭಾರತದ 10ನೇ ಶೂಟರ್ ಆಗಿ ರಿಯೋಗೆ ಅರ್ಹತೆ ಗಳಿಸಿದರು.