ಹೈದರಾಬಾದ್: ಮುಂಬರುವ ರಿಯೋ ಒಲಿಂಪಿಕ್ಸ್ ಗೆ ಭಾರತದ 400 ಮೀಟರ್ ಓಟಗಾರ್ತಿ ನಿರ್ಮಲಾ ಶೇರಾನ್ ಅರ್ಹತೆ ಪಡೆದಿದ್ದಾರೆ.
ರಾಷ್ಟ್ರೀಯ ಸೀನಿಯರ್ ಅಂತಾರಾಜ್ಯ ಅಥ್ಲೆಟಿಕ್ಸ್ ನಲ್ಲಿ ಹರಿಯಾಣ ಓಟಗಾರ್ತಿ ನಿರ್ಮಲಾ 51.48 ಸೆಕೆಂಡ್ ಗಳಲ್ಲಿ ಕ್ರಮಿಸಿ ರಿಯೋ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಇದರೊಂದಿಗೆ ರಿಯೋ ಒಲಿಪಿಂಕ್ಸ್ ಗೆ ಅರ್ಹತೆ ಪಡೆದ 24ನೇ ಅಥ್ಲೀಟ್ ಆಗಿದ್ದಾರೆ. 52.35 ಸೆಕೆಂಡ್ ನಿರ್ಮಲಾ ಅವರ ಹಿಂದಿನ ಸಾಧನೆಯಾಗಿತ್ತು. ಇದೀಗ 51.48 ಸೆಕೆಂಡ್ ನೊಂದಿಗೆ ಕನ್ನಡತಿ ಎಂ.ಆರ್ ಪೂವಮ್ಮರ 51.73 ಸೆಕೆಂಡ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.