ಕ್ರೀಡೆ

ಎರಡನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ಆ್ಯಂಡಿ ಮರ್ರೆ

Vishwanath S

ಲಂಡನ್: ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್ ನ ಆ್ಯಂಡಿ ಮರ್ರೆ ಚಾಂಪಿಯನ್ ಆಗಿದ್ದಾರೆ.

ಕೆನಡಾದ ಮಿಲೊಸ್ ರಾಯೊನಿಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆ್ಯಂಡಿ ಮರ್ರೆ 6-4, 7-6, 7-6 ಸೆಟ್ ಗಳಿಂದ ರಾಯೊನಿಕ್ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಇದು ಆ್ಯಂಡಿ ಮರ್ರೆ ಅವರು ಮೂರನೇ ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಇದಾಗಿದೆ.

ವಿಂಬಲ್ಡನ್ ಚಾಂಪಿಯನ್ ಆದ ಮರ್ರೆಗೆ 20 ಲಕ್ಷ ಬ್ರಿಟನ್ ಪೌಂಡ್(17.8 ಕೋಟಿ) ಲಭಿಸಿತು. ಇನ್ನು ರನ್ನರ್ ಅಪ್ ಆದ ರಾಯೊನಿಕ್ 10 ಲಕ್ಷ ಪೌಂಡ್(ರು. 8.9 ಕೋಟಿ) ಪಡೆದುಕೊಂಡರು.

SCROLL FOR NEXT