ಕ್ರೀಡೆ

ಯೂರೋ- 2016 ಫೈನಲ್: ಅಮೆರಿಕಾದಲ್ಲಿ ಸರಾಸರಿ 5.9 ದಶಲಕ್ಷ ಟಿವಿ ವೀಕ್ಷಕರು

Manjula VN

ಬ್ರಿಸ್ಟೋಲ್: ತೀವ್ರ ಕುತೂಹಲ ಮೂಡಿಸಿದ್ದ ಯೂರೋ ಕಪ್-2016 ಪೋರ್ಚುಗಲ್-ಫ್ರಾನ್ಸ್ ನಡುವಿನ ಅಂತಿಮ ಹಣಾಹಣಿ ಪಂದ್ಯವನ್ನು ಅಮೆರಿಕಾವೊಂದರಲ್ಲೇ ಸರಿ ಸುಮಾರು 5.9 ದಶಲಕ್ಷ ಟಿವಿ ವೀಕ್ಷಕರು ವೀಕ್ಷಿಸಿರುವುದಾಗಿ ವರದಿಗಳು ತಿಳಿಸಿವೆ.

2012ರಲ್ಲಿ ನಡೆದ ಅಂತಿಮ ಪಂದ್ಯವನ್ನು ಸುಮಾರು 5.76 ದಶಲಕ್ಷ ಜನರು ವೀಕ್ಷಿಸಿದ್ದರು. ಜು.11 ರಂದು ನಡೆದ ಯೂರೋ ಕಪ್ -2016 ಅಂತಿಮ ಹಣಾಹಣಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪೋರ್ಚುಗಲ್ ತನ್ನ ಫುಟ್ ಬಾಲ್ ಕೆರಿಯರ್ ನಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿತ್ತು.

ಅಂತಿಮ ಪಂದ್ಯದಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದ್ದ ಪೋರ್ಚುಗಲ್, ಬಲಿಷ್ಠ ಫ್ರಾನ್ಸ್ ತಂಡವನ್ನು 1-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಇತಿಹಾಸವನ್ನು ಬರೆದಿತ್ತು. ಇದರಂತೆ ಪೋರ್ಚುಗಲ್ ತಂಡ ಮೊಟ್ಟ ಮೊದಲ ಬಾರಿಗೆ ಯೂರೋ ಕಪ್ ಗೆದ್ದು ಸಾಧನೆ ಮಾಡಿದೆ.

ಭಾನುವಾರ ನಡೆದ ಈ ಪಂದ್ಯವನ್ನು ಇಎಸ್'ಪಿಎನ್ ವಾಹಿನಿ ಪ್ರಸಾರ ಮಾಡಿತ್ತು. ಇದರಂತೆ 4.54 ದಶಲಕ್ಷ ವೀಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸ್ಪೇನ್ ಮತ್ತು ಇಟಲಿ ನಡುವೆ ನಡೆದ ಪಂದ್ಯವನ್ನು 4.57 ದಶಲಕ್ಷ ಜನರು ವೀಕ್ಷಿಸಿದ್ದರು.

ಸ್ಪಾನಿಷ್ ಭಾಷೆಯಲ್ಲಿ ಇಎಸ್'ಪಿಎನ್ ಪಂದ್ಯವನ್ನು ಪ್ರಸಾರ ಮಾಡಿತ್ತು. ಪಂದ್ಯವನ್ನು 1.4 ದಶಲಕ್ಷ ಜನರು ವೀಕ್ಷಿಸಿದ್ದಾರೆ. 2012ಕ್ಕೆ ಹೋಲಿಕೆ ಮಾಡಿದರೆ ಶೇ.14 ವೀಕ್ಷಕರ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿಕೊಂಡ್ದಾರೆ.

SCROLL FOR NEXT