ನ್ಯೂಯಾರ್ಕ್: ಯುಎಸ್ ಓಪನ್ ಸಿಂಗಲ್ಸ್ ನ ಬಹುಮಾನದ ಮೊತ್ತ 22 ಕೋಟಿಯಿಂದ 23 ಕೋಟಿಗೆ ಏರಿಸಲಾಗಿದೆ.
ಯುಎಸ್ ಓಪನ್ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಬ್ಬರೂ ಚಾಂಪಿಯನ್ ತಲಾ 23 ಕೋಟಿ ರುಪಾಯಿ ಪಡೆಯಲಿದ್ದಾರೆ.
ಪ್ರಸಕ್ತ ವರ್ಷದಿಂದಲೇ 23 ಕೋಟಿ ಮೊತ್ತದ ಬಹುಮಾನ ನೀಡಲಾಗುತ್ತದೆ. ಇನ್ನು ಪ್ರತಿ ಸುತ್ತಿನ ಪಂದ್ಯಕ್ಕೂ ಶೇ.10ರಷ್ಟು ಸಂಬಳವನ್ನು ಹೆಚ್ಚಿಸಲಾಗಿದೆ. ರನ್ನರ್ ಅಪ್ ಸ್ಥಾನ ಪಡೆದವರು 11 ಕೋಟಿ ರುಪಾಯಿ ಸ್ವೀಕರಿಸಲಿದ್ದಾರೆ.