ಸಚಿನ್ ತೆಂಡೂಲ್ಕರ್, ವಿಜೇಂದರ್ ಸಿಂಗ್
ಮುಂಬೈ: ಡಬ್ಲೂಬಿಓ ಏಷಿಯ ಪೆಸಿಫಿಕ್ ಸೂಪರ್ ಮಿಡಲ್ ವೇಟ್ ಟೈಟಲ್ ಗಾಗಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ವಿರುದ್ಧ ಸೆಣಸಲಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಶುಭ ಕೋರಿದ್ದಾರೆ.
ವಿದೇಶಿ ನೆಲದಲ್ಲಿ ಆಡಿರುವ 6 ಪಂದ್ಯಗಳಲ್ಲೂ ಗೆದ್ದಿರುವ ವಿಜೇಂದರ್ ಸಿಂಗ್ ಅವರು ಇದೇ ಮೊದಲ ಬಾರಿಗೆ ದೇಸಿ ನೆಲದಲ್ಲಿ ಸೆಣಸಲಿದ್ದಾರೆ. ಹೀಗಾಗಿ ಸಚಿನ್ ತೆಂಡೂಲ್ಕರ್ ರಿಂಗ್ ಕಾ ಕಿಂಗ್ ಆಗಿ ಹೊರಹೊಮ್ಮಿ ದೇಶದ ಕೀರ್ತಿ ಹೆಚ್ಚಿಸುವಂತೆ ಟ್ವೀಟರ್ ನಲ್ಲಿ ಶುಭ ಕೋರಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದ ವಿಜೇಂದರ್ ಇಂದಿನ ಪಂದ್ಯ ಗೆಲ್ಲುವ ಹಾಟ್ ಫೆವರೆಟ್ ಎನಿಸಿದ್ದು, 30 ಪಂದ್ಯಗಳನ್ನಾಡಿ 23 ಪಂದ್ಯಗಳಲ್ಲಿ ಜಯಗಳಿಸಿರುವ ಕೆರ್ರಿ ನಡುವೆ ರೋಚಕ ಸೆಣಸಾಟ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics