ರೋಜರ್ ಫೆಡರರ್ ಮತ್ತು ಸಾನಿಯಾ ಮಿರ್ಜಾ 
ಕ್ರೀಡೆ

ರೋಜರ್ ಫೆಡರರ್ ಉತ್ತಮ ನಡತೆ ಸಾನಿಯಾ ಮಿರ್ಜಾ ಹೃದಯ ತಟ್ಟಿತಂತೆ

ಸ್ವಿಟ್ಜರ್‌ಲೆಂಡ್ ಆಟಗಾರ ರೋಜರ್ ಫೆಡರರ್ ಅವರು ತಮ್ಮ ಆಟದ ಮೂಲಕ ಹಲವರ ಹೃದಯ ಗೆದ್ದಿದ್ದಾರೆ. ಆದರೆ ಅವರ ಉತ್ತಮ ನಡತೆ ಸಾನಿಯಾ ಮಿರ್ಜಾ ಹೃದಯ..

ನವದೆಹಲಿ : ಸ್ವಿಟ್ಜರ್‌ಲೆಂಡ್ ಆಟಗಾರ ರೋಜರ್ ಫೆಡರರ್ ಅವರು ತಮ್ಮ ಆಟದ ಮೂಲಕ ಹಲವರ ಹೃದಯ ಗೆದ್ದಿದ್ದಾರೆ. ಆದರೆ ಅವರ ಉತ್ತಮ ನಡತೆ ಸಾನಿಯಾ ಮಿರ್ಜಾ ಹೃದಯ ತಟ್ಟಿದೆಯಂತೆ.

ಇತ್ತೀಚೆಗೆ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆ ‘ಏಸ್ ಅಗೆನೆಸ್ಟ್‌ ಆಡ್ಸ್‌’ಕೃತಿಯಲ್ಲಿ  ಸಾನಿಯಾ ರೋಜರ್ ಫೆಡರರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

2008 ರಲ್ಲಿ ನನ್ನ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ ಬಂದಿತ್ತು. ಅದು ದೊಡ್ಡ ವಿವಾದವಾಗಿತ್ತು. ಆ ಸಂದರ್ಭದಲ್ಲಿ  ನಾನು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಮೆಲ್ಬರ್ನ್‌ಗೆ ಹೋಗಿದ್ದೆ. ರೋಜರ್ ಫೆಡರರ್ ಎಲ್ಲರಿಗಿಂತ ಮೊದಲು  ಪ್ರಕರಣದ ಕುರಿತು ನನ್ನ ಹತ್ತಿರ ಮಾಹಿತಿ ಪಡೆದರು ಎಂದು ಸಾನಿಯಾ ಹೇಳಿದ್ದಾರೆ.

ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆದಾಗಲೂ ನನ್ನನ್ನು ಸಂಪರ್ಕಿಸಿ ಕಾಳಜಿ ವ್ಯಕ್ತಪಡಿಸಿದ್ದರು ಅವರು ತಮ್ಮ ಎದುರು ಮತ್ತು ಜೊತೆಗೆ ಆಡುವ ಎಲ್ಲ ಆಟಗಾರರ ಕುರಿತು ತೋರಿಸುವ ಪ್ರೀತಿ, ಕಾಳಜಿ ಮನಮುಟ್ಟುವಂತದ್ದು’ ಎಂದು ಸಾನಿಯಾ ಹೇಳಿದ್ದಾರೆ.

ಜೊತೆಗೆ ಲಂಡನ್ ನಲ್ಲಿ ತಮ್ಮ ಬಾಲ್ಯ ಸ್ನೇಹಿತೆ ಹಾಗೂ ರೋಜರ್ ಫೆಡರರ್ ಜೊತೆಗಿನ ಸಂದರ್ಭಗಳನ್ನ ಸಾನಿಯಾ ತಮ್ಮಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT