ಮಾಸ್ಕೋ: ಉದ್ದೀಪನ ಮದ್ದು ಸೇವನೆ ಆರೋಪ ಹಿನ್ನಲೆಯಲ್ಲಿ ಮುಂಬರುವ ರಿಯೋ ಒಲಿಂಪಿಕ್ಸ್ ನಿಂದ ರಷ್ಯಾ ಅಥ್ಲೆಟಿಕ್ಸ್ ತಂಡ ನಿಷೇಧಗೊಂಡಿದ್ದು, ಇದೀಗ ಒಲಿಂಪಿಕ್ಸ್ ನಿಂದ ರಷ್ಯಾವನ್ನೇ ನಿಷೇಧಗೊಳಿಸಬೇಕೆಂದು 10 ದೇಶಗಳ ಉದ್ದೀಪನ ನಿಗ್ರಹ ಪದಾಧಿಕಾರಿಗಳು ಮತ್ತು 20 ಅಥ್ಲೇಟಿ ಗಳ ಗುಂಪು ಆಗ್ರಹಿಸಲು ನಿರ್ಧರಿಸಿವೆ.
ರಷ್ಯಾ ಸರ್ಕಾರವೇ ಖುದ್ದಾಗಿ ಆಟಗಾರರು ಉದ್ದೀಪನ ಸೇವಿಸಲು ಅವಕಾಶ ನೀಡಿತ್ತು ಎಂಬ ಆಘಾತಕಾರಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಗುಂಪು ರಷ್ಯಾವನ್ನು ಒಲಿಂಪಿಕ್ಸ್ ನಿಂದ ನಿಷೇಧಗೊಳಿಸುವಂತೆ ವಿಶ್ವ ಒಲಿಂಪಿಕ್ಸ್ ನಾಯಕರಿಗೆ ಮನವಿ ನೀಡಲು ತೀರ್ಮಾನಿಸಿದ್ದಾರೆ.
ಸೋಚಿ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ರಷ್ಯಾದ ಹಲವು ಸ್ಫರ್ಧಿಗಳು ಉದ್ದೀಪನ ಸೇವಿಸಿದ್ದನ್ನು ಮುಚ್ಚಿ ಹಾಕಲು ರಷ್ಯಾ ಸರ್ಕಾರವೇ ಆದೇಶ ನೀಡಿತ್ತು. ಅದರಲ್ಲಿ ಕನಿಷ್ಠ 15 ಮಂದಿ ಚಿನ್ನ ವಿಜೇತರು ಸೇರಿದ್ದರು.