ಹಾಕಿ ದಂತಕಥೆ ಮೊಹಮದ್ ಶಾಹಿದ್ ನಿಧನ
ಮೂತ್ರಪಿಂಡ ಮತ್ತು ಯಕೃತ್ತು ತೊಂದರೆಯಿಂದ ಬಳಲುತ್ತಿದ್ದ ಹಾಕಿ ದಂತಕಥೆ ಮೊಹಮದ್ ಶಾಹಿದ್ ಗುರುಗಾಂವ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ನವದೆಹಲಿ: ಮೂತ್ರಪಿಂಡ ಮತ್ತು ಯಕೃತ್ತು ತೊಂದರೆಯಿಂದ ಬಳಲುತ್ತಿದ್ದ ಹಾಕಿ ದಂತಕಥೆ ಮೊಹಮದ್ ಶಾಹಿದ್ ಗುರುಗಾಂವ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
1980 ರ ಮಾಸ್ಕೊ ಒಲಂಪಿಕ್ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು ಶಾಹಿದ್.
ಜೀವನ್ಮರಣದ ಜೊತೆಗೆ ಹೋರಾಡುತ್ತಿದ್ದ ಈ ಮೇರು ಆಟಗಾರನಿಗೆ ಜಾಂಡಿಸ್ ಸೋಂಕು ತಗಲಿ ಮತ್ತು ಡೆಂಗ್ಯೂ ಕಾಣಿಸಿಕೊಂಡದ್ದರಿಂದ ಅವರ ಸ್ಥಿತಿ ಉಲ್ಬಣಗೊಂಡಿತ್ತು.
ಈ ತಿಂಗಳ ಮೊದಲ ಭಾಗದಲ್ಲಿ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಶಾಹಿದ್ ಅವರನ್ನು ವಾರಣಾಸಿಯಿಂದ ವಿಮಾನದ ಮೂಲಕ ಕರೆತಂದು ಗುರಗಾಂವ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ದೆಹಲಿ ಏಷಿಯಾ ಗೇಮ್ಸ್ 1982 ರಲ್ಲಿ ಬೆಳ್ಳಿ ಪದಕ ಮತ್ತು 1986 ರ ಸಿಯೋಲ್ ಏಶಿಯಾಡ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿಯು ಶಾಹಿದ್ ಆಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.