ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಕ್ರಿಕೆಟ್ ನ ಶ್ರೇಷ್ಠ ಜಾಹೀರಾತು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಎಂದು ಹೊಗಲಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ ಬಳಿಕ ಸೌರವ್ ಗಂಗೂಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿಯ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗಂಗೂಲಿ, ಕೊಹ್ಲಿ ವಿಶ್ವ ಕ್ರಿಕೆಟ್ ನ ಅತ್ಯುತ್ತಮ ಜಾಹೀರಾತು ಆಗಿದ್ದಾರೆ, ಜತೆಗೆ ಕ್ರಿಕೆಟ್ನ ದೊಡ್ಡ ರಾಯಭಾರಿ ಎಂದು ಹಾಡಿ ಹೊಗಳಿಸಿದ್ದಾರೆ.
ವೀಡಿಂಸ್ ನಾಡಲ್ಲಿ ವಿರಾಟ್ ಕೊಹ್ಲಿ ಮೊದಲ ದ್ವಿಶಕ ಸಿಡಿಸಿದ ಭಾರತದ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ನಿಂದಾಗಿ ವಿಂಡೀಸ್ ವಿರುದ್ಧ ಭಾರತ ಭರ್ಜರಿ ರನ್ ಕಲೆ ಹಾಕಲು ಸಾಧ್ಯವಾಗಿದೆ.