ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೊಹಮ್ಮದ್ ಅಲಿ ಅಂಗಗಳು ವೈಫಲ್ಯವಾಗಿ 30 ನಿಮಿಷವಾದರೂ ಹೃದಯಬಡಿತ ನಿಂತಿರಲಿಲ್ಲ!

ದಿಗ್ಗಜ ಬಾಕ್ಸರ್ ಮೊಹಮದ್ ಅಲಿ ಅವರ ಸಾವಿನ ಕೊನೆ ಕ್ಷಣಗಳನ್ನು ಹಂಚಿಕೊಂಡಿರುವ ಪುತ್ರಿ ಹನಾ ಅಲಿ...

ಮೊಹಮ್ಮದ್ ಅಲಿ
Mainashree
Updated On : 6 Jun 2016, 11:34 am
ವಾಷಿಂಗ್ಟನ್: ದಿಗ್ಗಜ ಬಾಕ್ಸರ್ ಮೊಹಮದ್ ಅಲಿ ಅವರ ಸಾವಿನ ಕೊನೆ ಕ್ಷಣಗಳನ್ನು ಹಂಚಿಕೊಂಡಿರುವ ಪುತ್ರಿ ಹನಾ ಅಲಿ, ನಮ್ಮ ತಂದೆಯ ಅಂಗಾಂಗಳು ವೈಫಲ್ಯವಾಗಿ 30 ನಿಮಿಷವಾದರೂ ಹೃದಯ ಬಡಿತ ನಿಂತಿರಲಿಲ್ಲ ಎಂದು ತಿಳಿಸಿದ್ದಾರೆ. 
ಸಾವಿನ ಕೊನೆಯ ಕ್ಷಣದಲ್ಲಿ ನಾವೆಲ್ಲರೂ ಅವರ ಸುತ್ತ ನಿಂತಿದ್ದೆವು. ಅಪ್ಪನನ್ನು ಅಪ್ಪಿಕೊಳ್ಳುತ್ತ ಮುತ್ತು ನೀಡಿದೆವು. ಅಪ್ಪನ ಎಲ್ಲ ಅಂಗಾಂಗಳು ವೈಫಲ್ಯ ಕಂಡಿದ್ದವು. ಆದರೆ, ಹೃದಯ ಮಾತ್ರ 30 ನಿಮಿಷಗಳವರೆಗೂ ಬಡಿದುಕೊಳ್ಳುತ್ತಲೇ ಇತ್ತು ಎಂದು ಅಲಿ ಪುತ್ರಿ ಹನಾ ಹಲಿ ತಮ್ಮ ಇನ್ಸ್ ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ. 
ಅನಾರೋಗ್ಯದಿಂದ ಬಳಲುತ್ತಿದ್ದ ಬಾಕ್ಸರ್ ಮೊಹಮದ್ ಅಲಿ ಕಳೆದ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದರು. 35 ವರ್ಷದಿಂದ ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅಲಿ, ಸೆಫ್ಟಿಕ್ ಶಾಕ್ ನಿಂದ ನಿಧನ ಹೊಂದಿದ್ದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement