ಮಹಮದ್ ಅಲಿ ಅಂತ್ಯ ಸಂಸ್ಕಾರ (ರಾಯಿಟರ್ಸ್ ಚಿತ್ರ) 
ಕ್ರೀಡೆ

ಮೊಹಮದ್ ಅಲಿ ಅ೦ತ್ಯಕ್ರಿಯೆ; ಗಣ್ಯರಿಂದ ಅಂತಿಮ ನಮನ

ಕಳೆದ ವಾರ ನಿಧನರಾದ ಬಾಕ್ಸಿ೦ಗ್ ದಂತಕಥೆ ಮೊಹಮದ್ ಅಲಿ ಅವರ ಅ೦ತ್ಯಕ್ರಿಯೆ ಶುಕ್ರವಾರ, ಅವರ ಹುಟ್ಟೂರಾದ ಲೂಯಿಸ್‍ವಿಲ್ಲೆಯಲ್ಲಿ ನೆರವೇರಿತು.

ಲೂಯಿಸ್‍ವಿಲ್ಲೆ: ಕಳೆದ ವಾರ ನಿಧನರಾದ ಬಾಕ್ಸಿ೦ಗ್ ದಂತಕಥೆ ಮೊಹಮದ್ ಅಲಿ ಅವರ ಅ೦ತ್ಯಕ್ರಿಯೆ ಶುಕ್ರವಾರ, ಅವರ ಹುಟ್ಟೂರಾದ ಲೂಯಿಸ್‍ವಿಲ್ಲೆಯಲ್ಲಿ ನೆರವೇರಿತು.

ಪಾಕಿ೯ನ್‍ಸನ್ ಕಾಯಿಲೆಯಿಂದ ಬಳಲುತ್ತಿದ್ದ ಮಹಮದ್ ಅಲಿ ಕಳೆದವಾರ ನಿಧನರಾಗಿದ್ದರು. 3 ಬಾರಿಯ ಹೆವಿವೇಟ್ ಚಾ೦ಪಿಯನ್ ಅಲಿ ಕಳೆದ ವಾರ ಅರಿಜೋನಾದ ಫಿನಿಕ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ನಿನ್ನೆ ಮುಸ್ಲಿಂ ಸ೦ಪ್ರದಾಯದ ಪ್ರಕಾರ ವಿಧಿವಿಧಾನಗಳು ನೆರವೇರಿದರೆ, ಶುಕ್ರವಾರ ಲೂಯಿಸ್‍ವಿಲ್ಲೆಯ ಪ್ರಮುಖ ಬೀದಿಗಳಲ್ಲಿ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಸಿ ಅ೦ತ್ಯಕ್ರಿಯೆ ನಡೆಸಲಾಯಿತು.
 ಶುಕ್ರವಾರ ಬೆಳಗ್ಗೆ ಆರ೦ಭವಾದ ಮೆರವಣಿಗೆ, ಅಲಿ ಬಾಲ್ಯದಲ್ಲಿ ತಿರುಗಾಡಿದ ರಸ್ತೆಗಳಲ್ಲಿ ಸಾಗಿ ಕೇವ್ ಹಿಲ್ ಚಿತಾಗಾರ ತಲುಪಿತು.

ಅಂತ್ಯ ಸಂಸ್ಕಾರಕ್ಕೆ ಗಣ್ಯರ ಆಗಮನ
ಇನ್ನು ಅಲಿ ಅವರ ಅಂತ್ಯ ಸಂಸ್ಕಾರಕ್ಕೆ ವಿಶ್ವವಿವಿಧ ಮೂಲಗಳಿಂದ ಗಣ್ಯರು ಆಗಮಿಸಿದ್ದರು.  ಬೆಳ್ಳಿತೆರೆಯಲ್ಲಿ ಮೊಹಮದ್ ಅಲಿ ಪಾತ್ರ ನಿಭಾಯಿಸಿದ್ದ ನಟ ವಿಲ್ ಸ್ಮಿತ್, ಮಾಜಿ ಹೆವಿವೇಟ್ ಚಾ೦ಪಿಯನ್ ಲೆನಾಕ್ಸ್ ಲೂಯಿಸ್ ಸೇರಿದ೦ತೆ ಸಾವಿರಾರು ಅಭಿಮಾನಿಗಳು ಮೆರವಣಿಗೆಯಲ್ಲಿದ್ದರು. ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿ೦ಟನ್, ಬಿಲ್ಲಿ ಕ್ರಿಸ್ಟಲ್, ಟಕಿ೯ ಅಧ್ಯಕ್ಷ ರಿಸೆಫ್ ತಯ್ಯೀಪ್ ಎಡೋ೯ಗನ್ ಮತ್ತಿತರ ಗಣ್ಯರೂ ಹಾಜರಿದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT