ಮಹಿಳಾ ರೆಸ್ಲರ್ ಭಾರತೀಯ ಮಹಿಳೆಯ ಪಂಚ್ (ಚಿತ್ರಕೃಪೆ: ಫೇಸ್ ಬುಕ್) 
ಕ್ರೀಡೆ

ಓಪನ್ ಚಾಲೆಂಜ್ ಹಾಕಿದ ವೃತ್ತಿಪರ ರೆಸ್ಲರ್ ಗೆ ಮಣ್ಣುಮುಕ್ಕಿಸಿದ ಭಾರತೀಯ ನಾರಿ

ಬಲಾಢ್ಯ ಮಹಿಳಾ ರೆಸ್ಲರ್ ಒಬ್ಬರು ನೀಡಿದ ಓಪನ್ ಚಾಲೆಂಜ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ಮಹಿಳೆಯೊಬ್ಬಳು ರೆಸ್ಲರ್ ರನ್ನು ನೆಲಕ್ಕುರುಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಜಲಂಧರ್: ಬಲಾಢ್ಯ ಮಹಿಳಾ ರೆಸ್ಲರ್ ಒಬ್ಬರು ನೀಡಿದ ಓಪನ್ ಚಾಲೆಂಜ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ಮಹಿಳೆಯೊಬ್ಬಳು ರೆಸ್ಲರ್ ರನ್ನು ನೆಲಕ್ಕುರುಳಿಸಿರುವ ವಿಡಿಯೋ ಇದೀಗ  ವೈರಲ್ ಆಗಿದೆ.

ರೆಸ್ಲಿಂಗ್ ತರಬೇತಿ ಕೇಂದ್ರ ಉದ್ಘಾಟನೆ ವೇಳೆ ಜಲಂಧರ್ ಗೆ ಆಗಮಿಸಿದ್ದ ವೃತ್ತಿಪರ ಮಹಿಳಾ ರೆಸ್ಲಿಂಗ್ ಪಟು ತಮ್ಮನ್ನು ತಾವು ಹೊಗಳಿಕೊಳ್ಳುವ ಬರದಲ್ಲಿ ತಮ್ಮ ವಿರುದ್ಧ ಫೈಟ್ ಮಾಡುವಂತೆ  ಅಲ್ಲಿ ನೆರೆದಿದ್ದವರಿಗೆ ಓಪನ್ ಚಾಲೆಂಜ್ ಹಾಕಿದ್ದರು. ಆದರೆ ಒಂದಷ್ಟು ಹೊತ್ತು ಯಾರೂ ಕೂಡ ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಅಲ್ಲೇ ಇದ್ದ ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಕವಿತಾ  ಅವರು ವೃತ್ತಿಪರ ರೆಸ್ಲಿಂಗ್ ಪಟು ಹಾಕಿದ್ದ ಓಪನ್ ಚಾಲೆಂಜ್ ಒಪ್ಪಿಕೊಂಡು ಅವರ ವಿರುದ್ಧ ಕಾದಾಟಕ್ಕೆ ನಿಂತರು.

ಕವಿತಾ ಧರಿಸಿದ್ದ ಭಾರತೀಯ ಉಡುಪು ನೋಡಿದ ಮಹಿಳಾ ರೆಸ್ಲರ್ ಸುಲಭವಾಗಿ ಆಕೆಯನ್ನು ಮಣಿಸಬಹುದು ಎಂದು ತಿಳಿದು ಒಮ್ಮೆಲೆ ಆಕೆಯನ್ನು ತಳ್ಳಿದರು. ಕೆಳಗೆ ಬಿದ್ದ ಕವಿತಾ ಮತ್ತೆ  ಮೇಲೆದ್ದು ರೆಸ್ಲರ್ ಮೇಲೆ ಮುಗಿಬಿದ್ದರು. ಕವಿತಾ ನೀಡಿದ ಪಂಚ್ ಗೆ ರೆಸ್ಲರ್ ಕೆಳಕ್ಕೆ ಉರುಳುತ್ತಿದ್ದಂತೆಯೇ ಕೂಡಲೇ ಎಚ್ಚೆತ್ತ ಆಯೋಜಕರು ಸಿಬ್ಬಂದಿಗಳನ್ನು ಕಳುಹಿಸಿ ಕವಿತಾ ಅವರನ್ನು  ತಡೆದರು. ಆದರೆ ಕೆಳಕ್ಕೆ ಬಿದ್ದಿದ್ದ ರೆಸ್ಲರ್ ಮತ್ತೆ ಮೇಲೆದ್ದು ಕವಿತಾರತ್ತ ಮುಗಿಬಿದ್ದಾಗ ಮತ್ತೆ ಕವಿತಾ ಅವರು ಅವರನ್ನು ಕೆಳಕ್ಕೆ ಕೆಡವಿ ಮುಖಕ್ಕೆ ಒಂದೆರಡು ಪಂಚ್ ನೀಡಿದರು.

ಕವಿತಾ ನೀಡಿದ ಪಂಚ್ ಗೆ ಮಹಿಳಾ ರೆಸ್ಲರ್ ನಿಜಕ್ಕೂ ಒಂದಷ್ಟು ಸಮಯ ಮೇಲೇಳೆಲೇ ಇಲ್ಲ. ಆ ಮೂಲಕ ಓಪನ್ ಚಾಲೆಂಜ್ ನೀಡಿ ಮಹಿಳಾ ರೆಸ್ಲರ್ ಕಣದಲ್ಲಿಯೇ ನಗೆ ಪಾಟಲಿಗೆ ಈಡಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ ಇಂಧನ ಬಿಕ್ಕಟ್ಟು: ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ಮೋದಿ ಸಭೆ, ಸಿಎಂ ಸಿದ್ದರಾಮಯ್ಯ ಗೈರು!

ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್ ನಲ್ಲಿ ಭಾರಿ ಹಿಮಪಾತ: ಏಳು ಮಂದಿ ದುರ್ಮರಣ, ಐವರಿಗೆ ಗಾಯ! Video

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ 15 ದಿನಕ್ಕೊಮ್ಮೆ 7000 ಕೋಟಿ ಆದಾಯ ನಷ್ಟ!

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

SCROLL FOR NEXT