ಮಹಿಳೆಯರ ಪ್ರೊ ಕಬಡ್ಡಿಗೂ ವೇದಿಕೆ ಸಜ್ಜು?
ಪುರುಷರ ಪ್ರೊ ಕಬಡ್ಡಿ ಅತ್ಯಂತ ಯಶಸ್ವಿಯಾಗಿದ್ದರಿಂದ ಮಹಿಳಾ ಪ್ರೊ ಕಬಡ್ಡಿಯನ್ನು ಆಯೋಜಿಸುವ ಚಿಂತನೆಯನ್ನು ಸಂಘಟಕರಾದ ಸ್ಟಾರ್ ಸ್ಪೋರ್ಟ್ಸ್...
ಬೆಂಗಳೂರು: ಪುರುಷರ ಪ್ರೊ ಕಬಡ್ಡಿ ಅತ್ಯಂತ ಯಶಸ್ವಿಯಾಗಿದ್ದರಿಂದ ಮಹಿಳಾ ಪ್ರೊ ಕಬಡ್ಡಿಯನ್ನು ಆಯೋಜಿಸುವ ಚಿಂತನೆಯನ್ನು ಸಂಘಟಕರಾದ ಸ್ಟಾರ್ ಸ್ಪೋರ್ಟ್ಸ್ ನಡೆಸುತ್ತಿದ್ದಾರೆ.
ಪುರುಷರ ನಾಲ್ಕನೇ ಆವೃತ್ತಿಯಲ್ಲಿ ಪ್ರಯೋಗಿಕವಾಗಿ ಮಹಿಳೆಯರ ಸರಣಿಯನ್ನು ಆಡಲಿಸಿದ್ದಾರೆ. ಇದು ಯಶಸ್ವಿಯಾದರೆ ಮುಂದಿನ ವರ್ಷದಿಂದ ಪೂರ್ಣ 8 ತಂಡಗಳ ಮಹಿಳೆಯರ ಪ್ರೊ ಕಬಡ್ಡಿಯನ್ನು ನೋಡಬಹುದು. ಪ್ರಸ್ತುತ ಮೂರು ತಂಡಗಳು ಮಾತ್ರ ಕಣಕ್ಕೆ ಇಳಿಯಲಿವೆ.
ಈ ಮೂರು ತಂಡಗಳಲ್ಲಿ ಮೂವರು ಕನ್ನಡತಿ ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಎರಡು ತಂಡಗಳಿಗೆ ನಾಯಕಿಯರಾಗಿದ್ದಾರೆ.
ಪ್ರಸ್ತುತ ಟೂರ್ನಿಯಲ್ಲಿ ಫೈರ್ ಬರ್ಡ್ಸ್, ಸ್ಟಾರ್ಮ್ಸ್ ಕ್ವೀನ್ ಮತ್ತು ಐಸ್ ದಿವಾಸ್ ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳಿಗೆ ಫ್ರಾಂಚೈಸಿ ಇರುವುದಿಲ್ಲ. ದೇಶದ ಒಟ್ಟು 25 ಆಟಗಾರ್ತಿಯರಿಗೆ ತರಬೇತಿ ಶಿಬಿರ ಮಾಡಿ 3 ತಂಡಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಫೈರ್ ಬರ್ಡ್ಸ್ ತಂಡಕ್ಕೆ ಮಂಗಳೂರಿನ ಮಮತಾ ಪೂಜಾರಿ ಹಾಗೂ ಸ್ಟಾರ್ಮ್ಸ್ ಕ್ವೀನ್ಸ್ ಗೆ ಕನ್ನಡತಿ ತೇಜಸ್ವಿನಿ ನಾಯಕಿಯಾಗಿದ್ದಾರೆ.