ಮುಂಬೈ: 4ನೇ ಆವೃತ್ತಿಯ ಪ್ರೊ ಕಬಡ್ಡಿ ನಾಳೆಯಿಂದ ಆರಂಭಗೊಳ್ಳಲಿದೆ. ಮುಂಬೈನಲ್ಲಿ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದ್ದು, ಪುನೇರಿ ಪಲ್ಟಾನ್ಸ್-ತೆಲುಗು ಟೈಟಾನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
38 ದಿನಗಳ ಕಾಲ ನಡೆಯಲು ಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಸೆಣಸಲಿದ್ದು, 60 ಪಂದ್ಯಗಳು ನಡೆಯಲಿವೆ. ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ದಿಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುನೇರಿ ಪಲ್ಟಾನ್ಸ್, ತೆಲುಗು ಟೈಟಾನ್ಸ್, ಯು ಮುಂಬಾ ತಂಡಗಳು ಭಾಗವಹಿಸಲಿವೆ.
ಪ್ರೊ ಕಬಡ್ಡಿ ವಿಜೇತ ತಂಡಕ್ಕೆ 1 ಕೋಟಿ ಬಹುಮಾನ, ರನ್ನರ್ಸ್ ಅಪ್ ತಂಡಕ್ಕೆ 50 ಲಕ್ಷ, ಮೂರನೇ ಸ್ಥಾನದ ತಂಡಕ್ಕೆ 30 ಲಕ್ಷ ಹಾಗೂ 4ನೇ ಸ್ಥಾನದ ತಂಡಕ್ಕೆ 20 ಲಕ್ಷ ರು. ಬಹುಮಾನ ಸಿಗಲಿದೆ.