ಧರ್ಮಶಾಲಾದಲ್ಲೆ ಭಾರತ-ಪಾಕ್ ವಿಶ್ವ ಟ್ವೆಂಟಿ20 ಪಂದ್ಯ: ರಾಜೀವ್ ಶುಕ್ಲಾ
ಭಾರತ -ಪಾಕಿಸ್ತಾನ ನಡುವಿನ ವಿಶ್ವಕಪ್ ಟ್ವೆಂಟಿ 20 ಪಂದ್ಯವಾಳಿಯು ನಿಗದಿಯಂತೆ ಮಾರ್ಚ್ 19ರಂದು ಧರ್ಮಶಾಲಾದಲ್ಲಿ...
ನವದೆಹಲಿ: ಭಾರತ -ಪಾಕಿಸ್ತಾನ ನಡುವಿನ ವಿಶ್ವಕಪ್ ಟ್ವೆಂಟಿ 20 ಪಂದ್ಯವಾಳಿಯು ನಿಗದಿಯಂತೆ ಮಾರ್ಚ್ 19ರಂದು ಧರ್ಮಶಾಲಾದಲ್ಲಿ ನಡೆಯಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಈ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಮಾರ್ಚ್ 19ರಂದು ನಿರ್ಣಾಯಕ ಗ್ರೂಪ್ 2 ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ. ಧರ್ಮಶಾಲಾ ಒಟ್ಟು 8 ಪಂದ್ಯಗಳನ್ನು ಆಯೋಜಿಸುತ್ತಿದೆ. ಅರ್ಹತಾ ಸುತ್ತಿನಿಂದ 6 ಮತ್ತು ಎರಡು ಮುಖ್ಯಪಂದ್ಯಗಳು. ಎರಡೂ ಮುಖ್ಯಪಂದ್ಯಗಳು ರೋಚಕ ಪಂದ್ಯಗಳಾಗಿದ್ದು, ಒಂದು ಭಾರತ-ಪಾಕ್ ನಡುವೆ ಮತ್ತು ಇನ್ನೊಂದು ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪಂದ್ಯವಾಗಿದೆ.
ಪಠಾಣ್ಕೋಟ್ ದಾಳಿ ನಡೆದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಮಾಜಿ ಯೋಧರು ಧರ್ಮಶಾಲಾದಲ್ಲಿ ಪಂದ್ಯಾವಳಿ ನಡೆಸುವ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಪಾಕಿಸ್ತಾನವು ಪೂರ್ಣ ಭದ್ರತೆ ನೀಡಬೇಕು ಎಂದು ನಿರೀಕ್ಷಿಸಿತ್ತು. ಈಗ ಪೂರ್ಣ ಭದ್ರತೆ ನೀಡುವುದಾಗಿ ಮತ್ತು ಪಂದ್ಯ ನಿಗದಿಯಂತೆ ನಡೆಯುತ್ತದೆ ಎಂದು ಬಿಸಿಸಿಐ ತಿಳಿಸಿದೆ.