ಪ್ರೊ ಕಬ್ಬಡ್ಡಿ ಚಾಂಪಿಯನ್ ತಂಡ ಪಾಟ್ನಾ (ಸಂಗ್ರಹ ಚಿತ್ರ) 
ಕ್ರೀಡೆ

ಪಾಟ್ನಾ ಪೈರೇಟ್ಸ್ ಪ್ರೊಕಬ್ಬಡ್ಡಿ ಚಾಂಪಿಯನ್

ಸತತ ಎರಡನೇ ಬಾರಿಗೆ ಪ್ರೊ ಕಬ್ಬಡ್ಡಿ ಚಾಂಪಿಯನ್ ಪಟ್ಟ ಪಡೆಯಬೇಕು ಎಂಬ ಯು ಮುಂಬಾ ತಂಡಕ್ಕೆ ಭಾರಿ ನಿರಾಸೆಯಾಗಿದ್ದು, ಪಾಟ್ನಾ ಪೈರೇಟ್ಸ್ ತಂಡ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರೊ ಕಬ್ಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ...

ನವದೆಹಲಿ: ಸತತ ಎರಡನೇ ಬಾರಿಗೆ ಪ್ರೊ ಕಬ್ಬಡ್ಡಿ ಚಾಂಪಿಯನ್ ಪಟ್ಟ ಪಡೆಯಬೇಕು ಎಂಬ ಯು ಮುಂಬಾ ತಂಡಕ್ಕೆ ಭಾರಿ ನಿರಾಸೆಯಾಗಿದ್ದು, ಪಾಟ್ನಾ ಪೈರೇಟ್ಸ್ ತಂಡ ಶನಿವಾರ ನಡೆದ  ಫೈನಲ್ ಪಂದ್ಯದಲ್ಲಿ ಪ್ರೊ ಕಬ್ಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮೂರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಚಾ೦ಪಿಯನ್ ಷಿಪ್ ನ ಫೈನಲ್ ಪಂದ್ಯದಲ್ಲಿ ರೈಡಿ೦ಗ್ ಹಾಗೂ ಡಿಫೆ೦ಡಿ೦ಗ್‍ ಎರಡೂ ವಿಭಾಗದಲ್ಲಿ ಉತ್ತಮ ನಿವ೯ಹಣೆ ತೋರಿದ ಪಾಟ್ನಾ ಪ್ಯೆರೇಟ್ಸ್  ಇದೇ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು. ಕೊನೇ ನಿಮಿಷದ ರೈಡಿ೦ಗ್‍ನಲ್ಲಿ ದೀಪಕ್ ನವಾ೯ಲ್ ತೋರಿದ ಚಾಣಾಕ್ಷ ಆಟ ಹಾಗೂ ಎದುರಾಳಿ ಯು ಮುಂಬಾದ ನಾಯಕ ಅನೂಪ್  ಕುಮಾರ್ ಮಾಡಿದ ಪ್ರಮಾದದಿ೦ದ ಪಟನಾ 31-28 ರಿ೦ದ ಮು೦ಬೈ ತ೦ಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿಯಿತು.

ಕೊನೇ 10  ಸೆಕೆ೦ಡ್ ಇರುವಾಗ ಪಾಟ್ನಾದ ಸ೦ದೀಪ್ 1 ಅ೦ಕ ಸ೦ಪಾದಿಸಿದರು. ಅದಕ್ಕೂ ಮುನ್ನವೇ ಪಟನಾ ಅಭೀಮಾನಿಗಳ ಸ೦ಭ್ರಮ ಮುಗಿಲುಮುಟ್ಟಿತ್ತು. ಉಳಿದಂತೆ ಯು ಮುಂಬಾದ  ರಿಷಾ೦ಕ್ ದೇವಾಡಿಗ ಬೆಸ್ಟ್ ರೈಡರ್ ಪ್ರಶಸ್ತಿಗೆ ಭಾಜನರಾದರೆ, ಬೆಸ್ಟ್ ಡಿಫೆ೦ಡರ್ ಪ್ರಶಸ್ತಿಯನ್ನು ಪಾಟ್ನಾ ತಂಡದ ಸ೦ದೀಪ್ ನರ್ವಾಲ್ ಪಡೆದರು. ಇನ್ನು ಪಾಟ್ನಾದ ರೋಹಿತ್ ಕುಮಾರ್  ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಶ್ರೇಷ್ಠ ಆಟಗಾರರಾಗಿ ಸ೦ದೀಪ್ ನರ್ವಾಲ್ ಪ್ರಶಸ್ತಿ ಸ್ವೀಕರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT