ಅಬೆಬಾ ಅರೆಗಾವಿ 
ಕ್ರೀಡೆ

ಉದ್ದಿಪನ ಮದ್ದು ಸೇವನೆ: ಶರಪೋವಾ ಆಯ್ತು, ಇದೀಗ ಅಬೆಬಾ ಸರದಿ

ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ ಅವರು ನಿಷೇಧಕ್ಕೊಳಗಾಗಿರುವ ‘ಮೆಲ್ಡೊನಿಯಮ್‌’ ಔಷಧಿ ಸೇವಿನೆ ಪ್ರಕರಣ ಇನ್ನು ಹಚ್ಚ...

ಸ್ಟಾಕ್‌ಹೋಮ್‌: ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ ಅವರು ನಿಷೇಧಕ್ಕೊಳಗಾಗಿರುವ ‘ಮೆಲ್ಡೊನಿಯಮ್‌’ ಔಷಧಿ ಸೇವಿನೆ ಪ್ರಕರಣ ಇನ್ನು ಹಚ್ಚ ಹಸಿರಿರುವಾಗಲೇ ಸ್ವೀಡನ್‌ನ ದೂರ ಅಂತರದ ಓಟಗಾರ್ತಿ ಅಬೆಬಾ ಅರೆಗಾವಿ ‘ಮೆಲ್ಡೊನಿಯಮ್‌’ ಔಷಧಿ ಸೇವಿಸಿದ್ದು ಸಾಬೀತಾಗಿ ಕ್ರೀಡಾವಲಯದಲ್ಲಿ ಆತಂಕ ಮೂಡಿಸಿದೆ.

ಉದ್ದಿಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಟೋಕಿಯೊ ಮ್ಯಾರಥಾನ್‌ ಚಾಂಪಿಯನ್‌ ಎನ್‌ಡೆಶಾ ನೆಗೆಸ್ಸೆ, ಉಕ್ರೇನ್‌ನ ಒಲ್ಗಾ ಅಬ್ರಾಮೊವಾ ಮತ್ತು ಅರ್ತೆಮ್‌ ತೈಸೆಂಕೊ ಹಾಗೂ ರಷ್ಯಾದ ಐಸ್‌ ಡಾನ್ಸರ್‌ ಏಕ್ತರಿನಾ ಬೊಬ್ರೊವಾ ಅವರ ಸಾಲಿಗೆ 25 ವರ್ಷದ ಇಥಿಯೋಪಿಯಾ ಮೂಲದ ಓಟಗಾರ್ತಿ ಅಬೆಬಾ ಸೇರಿದ್ದಾರೆ.

1500 ಮೀಟರ್ಸ್‌ ಓಟದ ಮಾಜಿ ವಿಶ್ವ ಚಾಂಪಿಯನ್‌ ಕೂಡ ಆಗಿರುವ ಅಬೆಬಾರಿಂದ ಕಳೆದ ತಿಂಗಳು ಸಂಗ್ರಹಿಸಿದ್ದ ಮೂತ್ರದ ಮಾದರಿಯಲ್ಲಿ (‘ಎ’) ಮೆಲ್ಡೊನಿಯಮ್‌ ಔಷಧಿಯ ಅಂಶ ಪತ್ತೆಯಾಗಿತ್ತು. ಹೀಗಾಗಿ ಅವರ ಮೇಲೆ  ಸ್ವೀಡನ್‌ ಅಥ್ಲೆಟಿಕ್‌ ಸಂಸ್ಥೆ ತಾತ್ಕಾಲಿಕ ನಿಷೇಧ ಹೇರಿತ್ತು. ‘ಬಿ’ ಮಾದರಿಯಲ್ಲೂ ಈ ಅಂಶ ಕಂಡು ಬಂದಿರುವುದರಿಂದ ಅವರು ಕನಿಷ್ಠ ನಾಲ್ಕು ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?