ನನ್ನ ಗೆಲುವು ಹುತಾತ್ಮ ಭಾರತೀಯ ಯೋಧರಿಗೆ ಅರ್ಪಣೆ: ವಿಜೇಂದರ್ ಸಿಂಗ್
ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಂದ ಸತತ ನಾಲ್ಕನೇ ಜಯವನ್ನು ಪಠಾಣ್‌ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ..
ಲಿವರ್‌ಪೂಲ್: ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಂದ ಸತತ ನಾಲ್ಕನೇ ಜಯವನ್ನು ಪಠಾಣ್‌ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅರ್ಪಿಸಿದ್ದಾರೆ.
30 ವರ್ಷದ ವಿಜೇಂದರ್ ವೃತ್ತಿ ಜೀವನದ ನಾಲ್ಕನೇ ಹೋರಾಟದಲ್ಲಿ ಹಂಗೇರಿಯ ಅಲೆಕ್ಸಾಂಡರ್ ಹೊವಾರ್ತ್ ಅವರನ್ನು ಮಣಿಸಿದ್ದರು. ಆರು ಸುತ್ತಿನ ಸ್ಪರ್ಧೆಯಲ್ಲಿ ಕೇವಲ ಮೂರು ಸುತ್ತುಗಳಲ್ಲಿ ಜಯ ಒಲಿಸಿಕೊಂಡಿದ್ದರು. ‘ಈ ಗೆಲುವನ್ನು ಜಮ್ಮು ಹಾಗೂ ಪಠಾಣ್‌ಕೋಟ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಅರ್ಪಿಸುವೆ’ ಎಂದು ಪಂದ್ಯದ ಬಳಿಕ ವಿಜೇಂದರ್ ಹೇಳಿದ್ದಾರೆ.
ವಿಜೇಂದರ್ ಅವರಿಗೆ ಹೂವಾರ್ತ್ ವಿರುದ್ಧದ ಪಂದ್ಯ ಈ ವರ್ಷದ ಮೊದಲ ಪಂದ್ಯ ಎಂಬುದು ವಿಶೇಷ. ಕಳೆದ ವರ್ಷ ಆಡಿದ ಮೂರು ಪಂದ್ಯಗಳಲ್ಲಿ ಈ ಒಲಿಂಪಿಯನ್ ಬಾಕ್ಸರ್ ಗೆದ್ದಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.