ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ 
ಕ್ರೀಡೆ

ನೆಸ್ಲೆ ಜಾಹೀರಾತಿನಲ್ಲಿ ಸಾನಿಯಾ-ಶೋಯೆಬ್ ಜೋಡಿಯ ಮೋಡಿ

ಭಾರತ - ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹೇಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಎರಡು ದೇಶಗಳ ಜನಸಾಮಾನ್ಯರಲ್ಲಿ...

ಮುಂಬೈ: ಭಾರತ - ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹೇಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಎರಡು ದೇಶಗಳ ಜನಸಾಮಾನ್ಯರಲ್ಲಿ ಈ ರೀತಿ ಇಲ್ಲ, ನಿಜವಾಗಿ ಹೇಳಬೇಕೆಂದರೆ ಕ್ರೀಡಾಳುಗಳು ಉಭಯ ದೇಶಗಳ ಸಂಬಂಧವನ್ನು ಸುಧಾರಿಸಬಹುದು ಎಂಬ ಮಾತು ಇದೆ.

ಇದೇ ವಿಷಯವನ್ನು ಇಟ್ಟುಕೊಂಡು ನೆಸ್ಲೆ ಎವ್ರಿಡೇ ಕಂಪೆನಿಯ ಟಿವಿ ಜಾಹೀರಾತನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗಿದೆ. ಅದೂ ಎರಡೂ ದೇಶಗಳ ಜನಪ್ರಿಯ ಕ್ರೀಡಾ ದಂಪತಿಗಳ ಮೂಲಕ. ಆ ಜಾಹೀರಾತು ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಭಾರತೀಯ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಆಕೆಯ ಪಾಕ್‌ ಕ್ರಿಕೆಟ್‌ ಆಟಗಾರ ಪತಿ ಶೋಯಿಬ್‌ ಮಲಿಕ್‌ ಅವರನ್ನು ಇಟ್ಟುಕೊಂಡು ನೆಸ್ಲೆ ಟಿವಿ ಜಾಹೀರಾತು ಸಿದ್ಧಪಡಿಸಿದೆ.
ನಿಜ ಜೀವನದಲ್ಲಿರುವಂತೆ ಈ ಜಾಹೀರಾತು ವಿಡಿಯೋದಲ್ಲೂ ಸಾನಿಯಾ - ಮಲಿಕ್‌ ಪತಿ ಅನ್ಯೋನ್ಯ ದಂಪತಿಯಾಗಿದ್ದು ಇಬ್ಬರೂ ತಮ್ಮ ತಮ್ಮ ದೇಶಗಳ ಉತ್ತಮ ಸಂಗತಿಗಳನ್ನು ಹೇಳಿಕೊಂಡು ಕಿತ್ತಾಡಿಕೊಳ್ಳುತ್ತಾರೆ. ಕ್ರಿಕೆಟ್ ವಿಷಯವೂ ಬರುತ್ತದೆ. ಕೊನೆಗೆ ಬಿಸಿಬಿಸಿಯಾದ ಒಂದು ಕಪ್ ಟೀ ಕುಡಿದು ರಿಲ್ಯಾಕ್ಸ್ ಆಗಿ ರಾಜಿಯಾಗುತ್ತಾರೆ. ಭಾರತ-ಪಾಕ್ ಸಂಬಂಧ ಕೂಡ ಇಷ್ಟು ಸುಲಭವಾಗಿ ಪರಿಹಾರವಾದರೆ ಒಳ್ಳೆಯದಲ್ಲವೇ ಎಂಬುದು ಜಾಹಿರಾತಿನ ಒಟ್ಟಾರೆ ಸಾರಾಂಶ.

ಜಾಹೀರಾತು ವಿಡಿಯೋದಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡಿರುವ ಸಾನಿಯಾ - ಮಲಿಕ್‌ ಜೋಡಿ ಎಲ್ಲರನ್ನೂ ಸೆಳೆಯುತ್ತಾರೆ. ವಿಡಿಯೋ ನೋಡಿ ಆನಂದಿಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT