ನೊವಾಕ್ ಜೊಕೊವಿಕ್ 
ಕ್ರೀಡೆ

ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ ಅಧಿಕ ಪ್ರಶಸ್ತಿ ಹಣ ನೀಡಬೇಕು: ಜೊಕೊವಿಕ್

ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ ಅಧಿಕ ಪ್ರಶಸ್ತಿ ಹಣ ನೀಡಬೇಕು ಎಂದು ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ...

ಇಂಡಿಯನ್‌ವೆಲ್ಸ್: ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ  ಅಧಿಕ ಪ್ರಶಸ್ತಿ ಹಣ ನೀಡಬೇಕು ಎಂದು ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್  ಒತ್ತಾಯಿಸಿದ್ದಾರೆ.
ಇಂಡಿಯನ್‌ವೆಲ್ಸ್  ಓಪನ್ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಜೊಕೊವಿಕ್ ಟೆನಿಸ್‌ನಲ್ಲಿ ಪ್ರೇಕ್ಷಕರ ಸಂಖ್ಯೆಗಳ ಅನುಪಾತದಲ್ಲಿ ಪ್ರಶಸ್ತಿ ಹಣ ತೀರ್ಮಾನಿಸುವ ರೀತಿ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುರುಷರ ಟೆನಿಸ್ ಪಂದ್ಯಗಳನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಪುರುಷ ಕ್ರೀಡಾಪಟುಗಳಿಗೆ ಹೆಚ್ಚಿಗೆ ಹಣ ನೀಡಬೇಕೆಂಬುದಕ್ಕೆ ಕಾರಣವೂ ಇದೇ ಆಗಿದೆ.
ಪ್ರೇಕ್ಷಕರ ಸಂಖ್ಯೆಯೂ, ಮಾರಾಟವಾದ ಟಿಕೆಟ್‌ನ ಸಂಖ್ಯೆಯನ್ನು ಪರಿಗಣಿಸಿ ಪ್ರಶಸ್ತಿ ಹಣವನ್ನು ನಿರ್ಧರಿಸಬೇಕಾಗಿದೆ ಎಂದು ಜೊಕೊವಿಕ್  ಅಭಿಪ್ರಾಯ ಪಟ್ಟಿದ್ದಾರೆ.
ಮಹಿಳಾ ಕ್ರೀಡಾಪಟುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಇಂಡಿಯನ್‌ವೆಲ್ಸ್ ಗಾರ್ಡನ್‌ನ ಸಿಇಒ ರೇಮಂಡ್ ಮೂರ್ ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಮಹಿಳಾ ಕ್ರೀಡಾಪಟುಗಳಿಗಿಂತ ನಮಗೆ ಹೆಚ್ಚಿನ ಪ್ರತಿಫಲ ನೀಡಬೇಕೆಂದು ವಿಶ್ವದ ನಂ. 1 ಆಟಗಾರ ಜೊಕೊವಿಕ್  ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!