ಜೊಹಾನ್ ಕ್ರೈಫ್ 
ಕ್ರೀಡೆ

ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ ವಿಧಿವಶ

ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ (68) ವಿಧಿವಶರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶ ಅರ್ಬುದದಿಂದ ಇವರು ಬಳಲುತ್ತಿದ್ದರು...

ಬಾರ್ಸಿಲೋನಾ: ಡಚ್ ಫುಟ್ಬಾಲ್ ದಂತಕತೆ ಜೊಹಾನ್ ಕ್ರೈಫ್ (68) ವಿಧಿವಶರಾಗಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶ ಅರ್ಬುದದಿಂದ ಇವರು ಬಳಲುತ್ತಿದ್ದರು. ಆಟಗಾರನಾಗಿಯೂ, ಕೋಚ್ ಆಗಿಯೂ ಕ್ರೈಫ್ ಫುಟ್ಬಾಲ್ ಇತಿಹಾಸದಲ್ಲಿ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದರು. 
 ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ ಬಾಲನ್ ಡಿ ಓರ್ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಇವರು ಮೂರು ಬಾರಿ ಗೆದ್ದಿದ್ದಾರೆ. ಡಚ್ ಫುಟ್ಬಾಲ್ ಕ್ಲಬ್ ಅಯಾಕ್ಸ್  ಸತತವಾಗಿ ಮೂರು ಬಾರಿ ಯುರೋಪಿಯನ್ ಚಾಂಪಿಯನ್ಸ್ ಆಗಿದ್ದು ಕ್ರೈಫ್ ರ ಸಾಮರ್ಥ್ಯದಿಂದಾಗಿತ್ತು.
1988ರಲ್ಲಿ ಸ್ಪಾನಿಷ್ ಕ್ಲಬ್ ಬಾರ್ಸಿಲೋನಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಇವರು  1992ರಲ್ಲಿ ಮೊದಲ ಬಾರಿಗೆ ಯುರೋಪ್ಯನ್ ಕಪ್ ಗೆಲ್ಲುವಂತೆ ಮಾಡಿದರು.
ಆಲ್‌ರೌಂಡರ್ ಆಗಿದ್ದ ಕ್ರೈಫ್ ಒಂದು ಕಾಲದಲ್ಲಿ ಬಾರ್ಸಿಲೋನಾದ ಅತ್ಯುತ್ತಮ ಕ್ರೀಡಾಪಟುವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT