ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಡಬ್ಲ್ಯುಬಿಒ ಏಷ್ಯಾ ಟೈಟಲ್ ಫೈಟ್ ಗೆ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಆಹ್ವಾನಿಸಿದ್ದಾರೆ.
ಸತತ ಗೆಲುವಿನ ಹುಮ್ಮಸ್ಸಿನಲ್ಲಿರುವ ವಿಜೇಂದರ್ ಏಪ್ರಿಲ್ 30ರಂದು ಲಂಡನ್ ನಲ್ಲಿ 5ನೇ ಬಾಕ್ಸಿಂಗ್ ನಲ್ಲಿ ಸೆಣಸಿದ ಬಳಿಕ ಜೂನ್ 11 ರಂದು ದೆಹಲಿ ಫೈಟ್ ಗೆ ಸಜ್ಜಾಗಲಿದ್ದಾರೆ.
ಸಚಿನ್ ತೆಂಡೂಲ್ಕರ್ ಭೇಟಿಯಾದ ವಿಜೇಂದರ್ ಯಾವುದೇ ಕ್ರೀಡಾಪಟುವಿಗೂ ಸಚಿನ್ ಅವರನ್ನು ಭೇಟಿಯಾಗುವುದೇ ಒಂದು ಸ್ಫೂರ್ತಿ. ನನ್ನ ಡಬ್ಲ್ಯುಬಿಒ ಏಷ್ಯಾ ಬಾಕ್ಸಿಂಗ್ ಫೈಟ್ ಗೆ ಅವರನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ.