ನವದೆಹಲಿ: ರಿಯೋ ಒಲಿಂಪಿಕ್ಸ್ ಸೌಹಾರ್ದ ರಾಯಭಾರಿಯಾಗಲು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ. ಇದೀಗ ಸೌಹಾರ್ದ ರಾಯಭಾರಿಯಾಗಿ ಸಲ್ಮಾನ್ ಖಾನ್, ಅಭಿನವ್ ಬಿಂದ್ರಾ ಜತೆ ಸಚಿನ್ ಸೇರ್ಪಡೆಯಾಗಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಸಂಘಟನೆ (ಐಒಎ) ಹೇಳಿದೆ.
ಸಲ್ಮಾನ್ ಖಾನ್ ಅವರನ್ನು ಸೌಹಾರ್ದ ರಾಯಭಾರಿ ಮಾಡಿದ್ದಕ್ಕೆ ಹೆಚ್ಚಿನ ಜನರು ವಿರೋಧ ಸೂಚಿಸಿದ್ದರು. ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಮತ್ತು ಕುಸ್ತಿಪಟು ಯೋಗೇಶ್ವರ್ ದತ್ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಖಾನ್‌ನ್ನು ನೇಮಕ ಮಾಡಿರುವ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ರಾಯಭಾರಿ ಸ್ಥಾನಕ್ಕೆ ಕ್ರೀಡಾಪಟು ಸಿಕ್ಕಿಲ್ಲವೇ? ಎಂದು ಮಿಲ್ಕಾ ಸಿಂಗ್ ಎಂದು ಅವರು ಪ್ರಶ್ನಿಸಿದ್ದರು.
ಸಲ್ಮಾನ್ ಖಾನ್‌ರನ್ನು ನೇಮಕ ಮಾಡಿದ್ದಕ್ಕೆ ಅಪಸ್ವರಗಳು ಎದ್ದ ಹಿನ್ನೆಲೆಯಲ್ಲಿ ಐಒಎ ಸಚಿನ್ ತೆಂಡೂಲ್ಕರ್ ಮತ್ತು ಬಿಂದ್ರಾ ಅವರಲ್ಲಿ ರಾಯಭಾರಿಯಾಗುವಂತೆ ಕೇಳಿಕೊಂಡಿತ್ತು. ಇದೀಗ ಸಚಿನ್ ತೆಂಡೂಲ್ಕರ್ ರಾಯಭಾರಿಯಾಗಲು ಒಪ್ಪಿದ್ದಾರೆ ಎಂದು ಐಒಎ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.