ಕ್ರೀಡೆ

ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿರುವ ಭಾರತದ 7 ಷಟ್ಲರ್‌ಗಳು

Vishwanath S

ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಭಾರತ ಹಲವು ಕ್ರೀಡಾಪಟುಗಳು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಇನ್ನು ಷಟ್ಲರ್ ವಿಭಾಗದಲ್ಲಿ ಭಾರತದಿಂದ ದಾಖಲೆಯ 7 ಷಟ್ಲರ್‌ಗಳು ಅರ್ಹತೆ ಪಡೆಯಲಿದ್ದಾರೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ಮಂಗಳವಾರ ತಿಳಿಸಿದೆ.

ಇನ್ನು ಒಲಿಂಪಿಕ್ಸ್ ನಲ್ಲಿ 2 ಬಾರಿ ಸ್ಪರ್ಧಿಸಿರುವ ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ, ವಿಶ್ವ ನಂ. 7 ಸೈನಾ ನೆಹ್ವಾಲ್ 3ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದರೆ. ವಿಶ್ವ ನಂ. 9 ಪಿವಿ ಸಿಂಧು 2ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ನಂ. 10 ಆಟಗಾರ ಕಿಡಂಬಿ ಶ್ರೀಕಾಂತ್ ಅರ್ಹತೆ ಪಡೆದಿದ್ದಾರೆ. ಪುರುಷರ ಡಬಲ್ಸ್ ನಲ್ಲಿ ಮನು ಆತ್ರಿ ಮತ್ತು ಬಿ ಸುಮಿತ್ ರೆಡ್ಡಿ ಅರ್ಹತೆ ಪಡೆದಿದ್ದಾರೆ. ಇನ್ನು ಮಹಿಳಾ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ಕನ್ನಡತಿ ಅಶ್ವಿನಿ ಪೊನ್ನಪ್ಪ ನಿರೀಕ್ಷೆಯಂತೆಯೇ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ.

SCROLL FOR NEXT