ಬೋಲ್ಟಾನ್: ನಾಕೌಟ್ ಪಂಚ್ ಗಳ ಮೂಲಕ ಸತತ ಐದು ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಆಘಾತ ನೀಡುತ್ತೇನೆ ಎಂದು ಪೋಲೆಂಡ್ ನ ಆಂಡ್ರೆಜ್ ಸೋಲ್ದ್ರಾ ತಿಳಿಸಿದ್ದಾರೆ.
ಶುಕ್ರವಾರ ಮಾರ್ಕನ್ ಕ್ರೀಡಾಂಗಣದಲ್ಲಿ ನಡೆಯಲಿರುವ ವೃತ್ತಿಪರ ಬ್ಯಾಕಿಂಗ್ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಗೆ ಮಣ್ಣು ಮುಕ್ಕಿಸುವೆ ಎಂದು ಆಂಡ್ರೆಜ್ ಸೋಲ್ದ್ರಾ ಹೇಳಿದ್ದಾರೆ.
ಸತತ ಐದು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ವಿಜಿಗೆ ನಾಳೆ ನಡೆಯಲಿರುವ ಪಂದ್ಯದಲ್ಲಿ ವೃತ್ತಿಪರ ಬಾಕ್ಸಿಂಗ್ ನ ನಿಜವಾದ ಹೋರಾಟ ಹೇಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತೇನೆ ಎಂದು ಸೋಲ್ದ್ರಾ ಹೇಳಿದ್ದಾರೆ.