ರೋಹಿತ್ ಶರ್ಮಾ 
ಕ್ರೀಡೆ

ಮುಂಬಯಿಯ ಖಂಡಾಲಾದಲ್ಲಿ 5 ಕೋಟಿ ರೂ ಬೆಲೆಯ ಬಂಗ್ಲೆ ಖರೀದಿಸಿದ ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ಟೀಂ ನಾಯಕ ರೋಹಿತ್ ಶರ್ಮಾ ಮುಂಬೈನ ಖಂಡಾಲಾದಲ್ಲಿ ವಿಲ್ಲಾವೊಂದನ್ನು 5 ಕೋಟಿ ರೂ.ಗೆ ಖರೀದಿಸಿದ್ದಾರೆ....

ಮುಂಬೈ: ಮುಂಬೈ ಇಂಡಿಯನ್ಸ್ ಟೀಂ ನಾಯಕ ರೋಹಿತ್ ಶರ್ಮಾ ಮುಂಬೈನ ಖಂಡಾಲಾದಲ್ಲಿ ವಿಲ್ಲಾವೊಂದನ್ನು 5 ಕೋಟಿ ರೂ.ಗೆ ಖರೀದಿಸಿದ್ದಾರೆ.ನಟ ಸುನೀಲ್ ಶೆಟ್ಟಿ ಕಂಪನಿ ಮಾಲೀಕತ್ವದ ಡಿಸ್ಕವರಿ ಎಂಬ ಹೆಸರಿನ ವಸತಿ ಯೋಜನೆಯಲ್ಲಿ ಶರ್ಮಾ ಕೆಲವು ಸಮಯದ ಹಿಂದೆ ಬಂಗ್ಲೆ ಖರೀದಿಸಿದ್ದಾರೆ.

ಬಂಗ್ಲೆಯ ಒಟ್ಟು ವಿಸ್ತೀರ್ಣ 7500 ಚದರ ಅಡಿಗಳಾಗಿದ್ದು ಪ್ರಸಕ್ತ ನಿರ್ಮಾಣ ಹಂತದಲ್ಲಿದೆ. ಇದು 5 ಬಿಎಚ್‌ಕೆ ವಿಲ್ಲಾ ಆಗಿದ್ದು, ಲಾನ್ ಮತ್ತು ಹಾಗೂ ಪ್ರತ್ಯೇಕ ಈಜುಕೊಳ ಹೊಂದಿದೆ. ನಿವೇಶನದ ಒಟ್ಟು ವಿಸ್ತೀರ್ಣ 10,000 ಚದರ ಅಡಿ ಇದೆ.

ಸುನೀಲ್ ಶೆಟ್ಟಿ ಖಂಡಾಲಾದಲ್ಲಿ ಡಿಸ್ಕವರಿ ಎಂಬ ಹೆಸರಿನ ಭಾರೀ ಪ್ರಾಜೆಕ್ಟ್ ಹೊಂದಿದ್ದು, ಏಳು ಎಕರೆಯಲ್ಲಿ 21 ಬಂಗ್ಲೆಗಳಿಂದ ಕೂಡಿದೆ. ಪ್ರತಿಯೊಂದು ವಿಲ್ಲಾ ಖಾಸಗಿ ಟೆರೇಸ್ ಹೊಂದಿದ್ದು, ಎಸ್2 ರಿಯಾಲಿಟಿಗೆ ಈ ಯೋಜನೆ ಸೇರಿದ್ದು, ಸುನೀಲ್, ಅವರ ಪತ್ನಿ ಮಾನಾ ಮತ್ತಿತರರು ಮಾಲೀಕರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!