ಕ್ರೀಡೆ

ಪ್ಯಾರಾಲಂಪಿಕ್ ಬೆಳ್ಳಿ ತಾರೆ ದೀಪಾ ಮಲಿಕ್‌ಗೆ 4 ಕೋಟಿ ಚೆಕ್ ವಿತರಿಸಿದ ಪ್ರಧಾನಿ ಮೋದಿ

Vishwanath S

ನವದೆಹಲಿ: ರಿಯೋ ಪ್ಯಾರಾಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್‌ಗೆ 4 ಕೋಟಿ ರುಪಾಯಿ ಮೊತ್ತದ ಚೆಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿದರು.

ಹರ್ಯಾಣದ ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು ಹರ್ಯಾಣ ಸರ್ಕಾರದ ವತಿಯಿಂದ 4 ಕೋಟಿ ರುಪಾಯಿ ನಗದು ಬಹುಮಾನವನ್ನು ದೀಪಾ ಮಲಿಕ್ ಗೆ ಹಸ್ತಾಂತರಿಸಿದರು.

ಪ್ಯಾರಾಲಿಂಪಿಕ್ ಶಾಟ್ ಪುಟ್ ನಲ್ಲಿ 4.61 ಮೀಟರ್ ಎಸೆತದೊಂದಿಗೆ 46 ವರ್ಷದ ದೀಪಾ 2ನೇ ಸ್ಥಾನ ಪಡೆದಿದ್ದರು. ಶಾಟ್ ಪುಟ್ ಮಾತ್ರವಲ್ಲದೆ ಜಾವೆಲಿನ್ ಥ್ರೋ ಮತ್ತು ಸ್ವಿಮ್ಮಿಂಗ್ ಕ್ರೀಡೆಗಳಲ್ಲೂ ದೀಪಾ ಭಾಗವಹಿಸಿ ಗಮನ ಸೆಳೆದಿದ್ದರು.

SCROLL FOR NEXT