ಸಾಂದರ್ಭಿಕ ಚಿತ್ರ 
ಕ್ರೀಡೆ

ಫುಟ್ಬಾಲ್ ವಿಶ್ವಕಪ್; ಬೀದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ನಿಷೇಧ: ಕತಾರ್

2022 ರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ವೇಳೆ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಚರ್ಚೆಯಲ್ಲಿರುವಂತೆ ಮೈದಾನದಲ್ಲಿಯೂ ಮದ್ಯಪಾನ ನಿಷೇಧಿಸಲಾಗಿರುತ್ತದೆ ಎಂದು ಮಂಗಳವಾರ

ದೋಹಾ: 2022 ರ ಫುಟ್ಬಾಲ್ ವಿಶ್ವಕಪ್ ಪಂದ್ಯಗಳ ವೇಳೆ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಚರ್ಚೆಯಲ್ಲಿರುವಂತೆ ಮೈದಾನದಲ್ಲಿಯೂ ಮದ್ಯಪಾನ ನಿಷೇಧಿಸಲಾಗಿರುತ್ತದೆ ಎಂದು ಮಂಗಳವಾರ ದೇಶದಲ್ಲಿ ಈ ಸರಣಿಯನ್ನು ಆಯೋಜಿಸುತ್ತಿರುವ ಸಮಿತಿ ತಿಳಿಸಿದೆ. 
ಕತಾರ್ ನಲ್ಲಿ ಬೇಸಿಗೆಯಲ್ಲಿ ಬಹಳ ತಾಪಮಾನವಿದ್ದು ಇದು ಚಳಿಗಾಲಕ್ಕೆ ಮುಂದೂಡಿರುವುದರಿಂದ ಈಗಾಗಲೇ ಬೇಸರದಲ್ಲಿರುವ ಫುಟ್ಬಾಲ್ ಅಭಿಮಾನಿಗಳಿಗೆ ಹಸನ್ ಅಲ್-ತವಾದಿ ಪ್ರತಿಕ್ರಿಯೆಗಳು ಇನ್ನಷ್ಟು ಬೇಸರ ಮೂಡಿಸಿವೆ. 
"ಬೀದಿಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ನಿಷೇಧಿಸಲಾಗಿರುತ್ತದೆ. ಇದು ಅಂತಿಮ" ಎಂದು ಪತ್ರಿಕೆಯೊಂದಕ್ಕೆ ಸಮಿತಿಯ ಅಧಿಕಾರಿ ಅಲ್-ತವಾದಿ ಹೇಳಿದ್ದಾರೆ, 
"ನಾವು ಆಟದ ಮೈದಾನಗಳಲ್ಲಿಯೂ ಮದ್ಯಪಾನದ ಅವಕಾಶಕ್ಕೆ ವಿರುದ್ಧವಾಗಿದ್ದೇವೆ. ಸಂಪೂರ್ಣ ನಿಷೇಧ ಇರುವುದಿಲ್ಲ. ದೂರದ ಪ್ರದೇಶಗಳಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಡಲಾಗುವುದು" ಎಂದು ಅವರು ಹೇಳಿದ್ದಾರೆ. 
ಕತಾರ್ ನಲ್ಲಿ ಮದ್ಯಪಾನ ಕಾನೂನು ಬಾಹಿರವಾಗಿದ್ದು, ಕೆಲವು ಹೋಟೆಲ್ ಗಳಲ್ಲಿ ಮಾತ್ರ ಸೇವಿಸಬಹುದಾಗಿದೆ. 
ಇದು ಫುಟ್ಬಾಲ್ ಆಡಳಿತಾತ್ಮಕ ಸಂಸ್ಥೆ ಫಿಫಾ ಮತ್ತು ಪ್ರಾಯೋಜಕರಾದ ಬಿಯರ್ ಮಾರಾಟ ಸಂಸ್ಥೆ ಬಡ್ ವೈಸರ್ ಜೊತೆಗೆ ತೊಂದರೆಗಳನ್ನು ತಂದೊಡ್ಡಲಿದೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್