ಕ್ರೀಡೆ

ಚೀನಾ ಓಪನ್ ಟೂರ್ನಿ ಫೈನಲ್ ಗೆ ಪಿವಿ ಸಿಂಧು ಲಗ್ಗೆ

Vishwanath S
ಪುಝೌ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತ ಸ್ಟಾರ್ ಷಟ್ಲರ್ ಪಿವಿ ಸಿಂಧು ಚೀನಾ ಓಪನ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. 
ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 11-21, 23-21, 21-19 ಸೆಟ್ ಗಳ ಅಂತರದಲ್ಲಿ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ರನ್ನು ಮಣಿಸಿದರು. ಇನ್ನು ಫೈನಲ್ ಪಂದ್ಯದಲ್ಲಿ ಚೀನಾದ 8ನೇ ಶ್ರೇಯಾಂಕದ ಸುನ್ ಯು ವಿರುದ್ಧ ಸೆಣಸಲಿದ್ದಾರೆ.
ಹೈದರಾಬಾದ್ ಆಟಗಾರ್ತಿ ಸಿಂಧು ತಮ್ಮ ವೃತ್ತಿಜೀವನದ ಮೊಟ್ಟ ಮೊದಲ ಸೂಪರ್ ಸೀರಿಸ್ ಪ್ರೀಮಿಯರ್ ಪ್ರಶಸ್ತಿಗೆ ಇನ್ನು ಒಂದು ಹೆಜ್ಜೆ ದೂರದಲ್ಲಿದ್ದಾರೆ. 
SCROLL FOR NEXT