ಕ್ರೀಡೆ

28 ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾ ರತ್ನ ಪ್ರಶಸ್ತಿ

Lingaraj Badiger
ಉಡುಪಿ: ರಾಜ್ಯ ಸರ್ಕಾರ ಗುರುವಾರ 2015-16ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದ್ದು, ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ಮಾಡಿದ 16 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ,10 ಕ್ರೀಡಾಳುಗಳಿಗೆ ಕ್ರೀಡಾರತ್ನ ಹಾಗೂ ಇಬ್ಬರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪ್ರಕಟಿಸಿದ ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು, ಕ್ರೀಡಾ ಸಾಧಕರಿಗೆ ಅಕ್ಟೋಬರ್‌ 7 ರಂದು ಮೈಸೂರಿನ ಜಿ.ಕೆ.ಗ್ರೌಂಡ್ಸ್‌ ಅಮೃತ ಮಹೋತ್ಸವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಏಕಲವ್ಯ ಪ್ರಶಸ್ತಿಗೆ ಭಾಜನರಾದವರಿಗೆ 2 ಲಕ್ಷ ರುಪಾಯಿ ನಗದು, ಸ್ಕ್ರೋಲ್, ಏಕಲವ್ಯನ ಕಂಚಿನ ವಿಗ್ರಹ ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾದವರಿಗೆ ತಲಾ 1 ಲಕ್ಷ ರುಪಾಯಿ ನಗದು ,ಸ್ಕ್ರೋಲ್ ಮತ್ತು ಪ್ರಶಸ್ತಿ ಫ‌ಲಕ ನೀಡಲಾಗುತ್ತದೆ. ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದವರಿಗೆ ತಲಾ 1.5ಲಕ್ಷ ರುಪಾಯಿ ನಗದು ,ಸ್ಕ್ರೋಲ್ ಮತ್ತು ಪ್ರಶಸ್ತಿ ಫ‌ಲಕ ನೀಡಲಾಗುತ್ತದೆ ಎಂದು ಹೇಳಿದರು.
ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಳುಗಳು
ದಾಮಿನಿ ಕೆ ಗೌಡ -ಈಜು
ವಿದ್ಯಾ ಪಿಳೈ -ಬಿಲಿಯರ್ಡ್ಸ್
ಪವನ್‌ ಶೆಟ್ಟಿ -ಬಾಡಿ ಬಿಲ್ಡಿಂಗ್‌ 
ನಿತಿನ್‌ ತಿಮ್ಮಯ್ಯ -ಹಾಕಿ 
ರಾಜಗುರು ಎನ್‌ -ಕಬಡ್ಡಿ
ಕೃಷ್ಣ.ಎ.ನಾಯ್ಕೊಡಿ -ಸೈಕ್ಲಿಂಗ್‌
ಅರವಿಂದ ಎ -ಬಾಸ್ಕೆಟ್‌ ಬಾಲ್‌ 
ಅರ್ಪಿತಾ ಎಂ -ಅಥ್ಲೆಟಿಕ್ಸ್‌ 
ಮೊಹಮದ್‌ ರಫೀಕ್‌ ಹೋಳಿ -ಕುಸ್ತಿ 
ಮೇಘನ ಎಂ ಸಜ್ಜನರ್‌ -ರೈಪಲ್‌ ಶೂಟಿಂಗ್‌
ಧೃತಿ ತಾತಾಚಾರ್‌ ವೇಣುಗೋಪಾಲ್‌ -ಲಾನ್‌ ಟೆನ್ನಿಸ್‌ 
ಅನುಪ್‌ ಡಿ'ಕೋಸ್ಟ- ವಾಲಿಬಾಲ್‌
ಜೆ.ಎಂ.ನಿಶ್ಚಿತಾ-ಶಟಲ್‌ ಬ್ಯಾಡ್ಮಿಂಟನ್‌
ಶಾವದ್‌ ಜೆ.ಎಂ-ಪ್ಯಾರಾ ಅಥ್ಲೆಟಿಕ್ಸ್‌ 
ಉಮೇಶ್‌ ಆರ್‌ ಖಾಡೆ -ಪ್ಯಾರಾ ಈಜು 
ಕಂಚನ್‌ ಮುನ್ನೋಳ್‌ ಕರ್‌ -ಭಾರ ಎತ್ತುವುದು 
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದವರು
ಡಿ.ಎನ್‌.ರುದ್ರಸ್ವಾಮಿ-ಯೋಗ
ಪೂರ್ಣಿಮಾ ವಿ- ಥ್ರೋ ಬಾಲ್‌ (ಪೂತ್ತೂರು )
ಅಮೋಘ. ಯು.ಚಚಡಿ -ಅಟ್ಯಾ-ಪಾಟ್ಯಾ 
ರಂಜಿತ ಎಂ.ಪಿ.ಬಾಲ್‌ ಬ್ಯಾಂಡ್ಮಿಂಟನ್‌
ಪ್ರದೀಪ್‌ ಕೆ.ಸಿ.ಖೋ-ಖೋ
ಸುಮಿತಾ ಯು .ಎಂ-ಕಬಡ್ಡಿ
ಡಾ.ಜೀವಂಧರ್‌ ಬಲ್ಲಾಳ್‌ -ಕಂಬಳ
ಆನಂದ್‌ ಇರ್ವತ್ತೂರು -ಕಂಬಳ
ಆನಂದ್‌ ಎಲ್‌ -ಕುಸ್ತಿ
ಮೊಳಪ್ಪ ವೀರಪ್ಪ ಗುಳಬಾಳ-ಗುಂಡು ಎತ್ತುವುದು 
ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದವರು
ಜಾನ್‌ ಕ್ರಿಸ್ಟೋಫ‌ರ್‌ ನಿರ್ಮಲ್‌ ಕುಮಾರ್‌ -ಈಜು 
ಶಿವಾನಂದ್‌ ಆರ್‌-ಕುಸ್ತಿ 
SCROLL FOR NEXT